ರಾಯ್‌ ಬರೇಲಿಯಿಂದ ರಾಹುಲ್‌ ಕಣಕ್ಕೆ …..!

ನವದೆಹಲಿ: 

     ಕುಟುಂಬದ ಭದ್ರಕೋಟೆಯಾದ ರಾಯಬರೇಲಿಯಿಂದ ಸಂಸದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದು, ಹಿರಿಯ ನಾಯಕ ಕೆಎಲ್ ಶರ್ಮಾ ಅಮೇಥಿಯಿಂದ ಕಣಕ್ಕಿಳಿಯಲಿದ್ದಾರೆ. ಪ್ರತಿಷ್ಠಿತ ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವ ಕೆಲವೇ ಗಂಟೆಗಳ ಮೊದಲು ಘೋಷಣೆಯಾಗಿದೆ.

     ಲೋಕಸಭೆ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಹೊಸ ತಂತ್ರಗಾರಿಕೆಯನ್ನ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ ಈಗಾಗಲೇ ವಯನಾಡಿನಿಂದ ಸ್ಪರ್ಧಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇದೀಗ ರಾಯ್​ಬರೇಲಿಯಿಂದಲೂ ಕಣಕ್ಕಿಳಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ನಾಮಪತ್ರ ಸಲ್ಲಿಸುವ ಗಡುವು ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಗೊಳ್ಳಲಿದೆ. ಎರಡೂ ಸ್ಥಾನಗಳನ್ನು ಗಾಂಧಿ-ನೆಹರು ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಗಾಂಧಿ ಕುಟುಂಬಸ್ಥರು ಹಲವಾರು ದಶಕಗಳಿಂದ ರ್ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. ರಾಯ್​ ಬರೇಲಿಯಲ್ಲಿ ಮೇ 20ರಂದು ಮತದಾನ ನಡೆಯಲಿದೆ. ಇನ್ನೂ ಇಷ್ಟು ದಿನಗಳ ಕಾಲ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ವಿಚಾರಕ್ಕೆ ಇಂದು ತೆರೆ ಬಿದಿದ್ದು, ಪ್ರಿಯಾಂಕಾ ಗಾಂಧಿ ಎಲ್ಲೂ ಸ್ಪರ್ಧಿಸುತ್ತಿಲ್ಲ ಎಂಬುದು ತಿಳಿದುಬಂದಿದೆ.