ಲಖನೌ:
ಅಯೋಧ್ಯೆಯಲ್ಲಿ ನಿರಾಶ್ರಿತರಾದವರಿಗೆ ಪರಿಹಾರ ನೀಡುವ ಕುರಿತು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದು ರಾಹುಲ್ ಹೇಳಿಕೆ ಯುಪಿ ಮತ್ತು ಅಯೋಧ್ಯೆಗೆ ಮಾನಹಾನಿ ಮಾಡುವ ಸಂಚು ಎಂದು ಹೇಳಿದ್ದಾರೆ.
ಸದನದಲ್ಲಿ ರಾಹುಲ್ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು. ಅಯೋಧ್ಯೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ನಿರಾಶ್ರಿತರಾದ ಜನರಿಗೆ ಪರಿಹಾರವಾಗಿ 1,733 ಕೋಟಿ ರೂಪಾಯಿ ನೀಡಲಾಗಿದೆ ಎಂದು ಯೋಗಿ ಹೇಳಿದರು.
ರಾಹುಲ್ ಗಾಂಧಿ ಮತ್ತು ಅವರ ಸಹಚರರು ಅಯೋಧ್ಯೆಯನ್ನು ಗಡಿಪಾರು ಮಾಡಿದ್ದು ಮಾತ್ರವಲ್ಲದೆ ಸರಯೂರನ್ನು ರಕ್ತದಲ್ಲಿ ಮುಳುಗಿಸಿದ್ದರು. ಇಂದು, ಅಯೋಧ್ಯೆ ತನ್ನ ವೈಭವವನ್ನು ಮರುಸ್ಥಾಪಿಸುತ್ತಿರುವಾಗ ಮತ್ತು ಇಡೀ ಜಗತ್ತನ್ನು ಆಕರ್ಷಿಸುತ್ತಿರುವಾಗ, ಕಾಂಗ್ರೆಸ್ ಅದನ್ನು ಹೇಗೆ ಒಳ್ಳೆಯದು ಎಂದು ಪರಿಗಣಿಸುತ್ತದೆ? ಕಾಂಗ್ರೆಸ್ ಸುಳ್ಳಿನ ಕಂತೆ. ನಿಜ ಹೇಳಬೇಕೆಂದರೆ 1733 ಕೋಟಿ ರೂಪಾಯಿ ಅಯೋಧ್ಯೆಯ ಜನರಿಗೆ ಪರಿಹಾರವಾಗಿ ನೀಡಲಾಗಿದೆ.
ರಾಮಪಥ, ಭಕ್ತಿಪಥ, ಜನ್ಮಭೂಮಿ ಪಥ ಅಥವಾ ವಿಮಾನ ನಿಲ್ದಾಣವೇ ಆಗಿರಲಿ, ಯಾರ ಜಮೀನು, ಅಂಗಡಿಗಳು ಮತ್ತು ಮನೆಗಳು ಭಾಗಿಯಾಗಿವೆಯೋ ಅವರಿಗೆ ಪರಿಹಾರ ನೀಡಲಾಗಿದೆ. ಹಿಂಬದಿಯಲ್ಲಿ ಅಂಗಡಿ ಕಟ್ಟಲು ಜಾಗ ಇದ್ದವರಿಗೆ ಅಂಗಡಿಗಳನ್ನು ನಿರ್ಮಿಸಿಕೊಟ್ಟಿದೇವೆ. ನಿವೇಶನ ಇಲ್ಲದವರಿಗೆ ಮಳಿಗೆ ನೀಡುವ ಕೆಲಸವನ್ನು ಬಹುಹಂತದ ಕಾಂಪ್ಲೆಕ್ಸ್ ನಿರ್ಮಿಸಿ ಕೊಡಲಾಗುತ್ತದೆ ಎಂದರು. ಇದು ಯುಪಿ ಮತ್ತು ಅಯೋಧ್ಯೆಯ ಮಾನಹಾನಿ ಮಾಡುವ ಸಂಚು. ಇದು ಭಾರತ ಮತ್ತು ಅಯೋಧ್ಯೆಯ ಪ್ರತಿಷ್ಠೆಯನ್ನು ಹಾಳುಮಾಡುವ ಮನಸ್ಥಿತಿಯ ಭಾಗವಾಗಿದೆ. ಇದನ್ನು ಈ ಆಕಸ್ಮಿಕ ಹಿಂದೂಗಳು ಸ್ವಾತಂತ್ರ್ಯ ನಂತರ ನಿರಂತರವಾಗಿ ಮಾಡುತ್ತಿದ್ದಾರೆ.
ಹಿಂದೂಗಳ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರವಾಗಿ ಖಂಡಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಖಂಡನೀಯ ಹೇಳಿಕೆಗೆ ಜಗತ್ತಿನಾದ್ಯಂತ ಹರಡಿರುವ ಕೋಟ್ಯಂತರ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.