ಮೂಡಲಗಿ : ರಸಗೊಬ್ಬರ ಮಳಿಗೆ ಮೇಲೆ ದಾಳಿ

ಮೂಡಲಗಿ:

    ಮೂಡಲಗಿ ತಾಲ್ಲೂಕಿನ ಕಲ್ಲೋಳಿ, ತುಕ್ಕಾನಟ್ಟಿ ಗ್ರಾಮಗಳಲ್ಲಿ ಕೃಷಿ ಪರಿಕರ ರಸಗೊಬ್ಬರ, ಬೀಜ, ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ಹಾಗೂ ಕೃಷಿ ಅಧಿಕಾರಿ ವಿನಾಯಿಕ ತುರಾಯಿದಾರ ನೇತೃತ್ವದಲ್ಲಿ ದಾಳಿ ಮಾಡಿ ರಸಗೊಬ್ಬರ, ಬೀಜಗಳ ದಾಸ್ತಾನು ಮತ್ತು ವಿತರಣೆ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಂ.ನದಾಫ, ‘ರಸಗೊಬ್ಬರ ಮತ್ತು ಬೀಜಗಳನ್ನು ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡಿದರೆ ಅಂತವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಪರವಾನಗೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

   ಮಾರಾಟಗಾರರು ಸರ್ಕಾರದ ಹಾಗೂ ಇಲಾಖೆಯ ನಿಯಮಗಳನ್ನು ಪಾಲಿಸಬೇಕು. ದರಪಟ್ಟಿ ಮತ್ತು ರಸಗೊಬ್ಬರ ದಾಸ್ತಾನು ಲಭ್ಯತೆ ಬಗ್ಗೆ ಮಾಹಿತಿ ಫಲಕಗಳನ್ನು ಮಳಿಗೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ರಸಗೊಬ್ಬರವನ್ನು ಪಿಓಎಸ್‌ ಮಶೀನ್‌ ಮೂಲಕವೇ ವಿತರಣೆ ಮಾಡಬೇಕು ಎಂದರು.

   ಈ ವರ್ಷ ಮುಂಗಾರು ಹಂಗಾಮು ಉತ್ತಮ ಮಳೆಯಿಂದ ಪ್ರಾರಂಭವಾಗಿದ್ದರಿಂದ ರೈತರಿಗೆ ಗುಣಮಟ್ಟದ ಬೀಜ ಪೂರೈಸಬೇಕು ಹಾಗೂ ಕಡ್ಡಾಯವಾಗಿ ರೈತರಿಗೆ ರಶೀದಿಗಳನ್ನು ನೀಡಬೇಕು. ಕೃಷಿ ಇಲಾಖೆಯಿಂದ ಪ್ರತಿಯೊಂದು ರಸಗೊಬ್ಬರ ಮಳಿಗೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಅವರು ಮಳಿಗೆಗೆಗಳಿಗೆ ಭೇಟ್ಟಿ ನೀಡಿ ಬೀಜ, ಇತರೆ ಕೃಷಿ ಪರಿಕರಗಳ ಗುಣಮಟ್ಟ ಹಾಗೂ ಯೂರಿಯಾ, ಡಿಎಪಿ ರಸಗೊಬ್ಬರಗಳ ದಾಸ್ತಾನು, ಭೌತಿಕ ದಾಸ್ತಾನು ಪರಿಶೀಲಿಸುವರು. ರೈತರಿಂದ ಯಾವುದೇ ದೂರುಗಳು ಬಂದರೆ ರಸಗೊಬ್ಬರ ಮಾರಾಟಗಾರರ ಮೇಲೆ ಅಗತ್ಯ ವಸ್ತುಗಳ ಅಧಿನಿಯಮ 1955ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವರು.

    ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ರಸಗೊಬ್ಬರ ಮಳಿಗೆಯಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ದಾಖಲೆಗಳನ್ನು ಪರಿಶೀಲಿಸುತ್ತಿರುವರು. ಕೃಷಿ ಅಧಿಕಾರಿ ವಿನಾಯಿಕ ತುರಾಯಿದಾರ ಚಿತ್ರದಲ್ಲಿ ಇರುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap