SSLC ಪಾಸ್ ಆದವರಿಗೆ ರೈಲ್ವೆಯಲ್ಲಿದೆ ಉದ್ಯೋಗಾವಕಾಶ!!

 

      ರೈಲ್ವೆ ನೇಮಕಾತಿ ಮಂಡಳಿ ಈಗ ಉದ್ಯೋಗ ನೇಮಕಾತಿ ಕುರಿತು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಪದವೀಧರರು ಪಿಯುಸಿ ಹಾಗೂ ಹತ್ತನೇ ತರಗತಿಯನ್ನು ಉತ್ತೀರ್ಣರಾದವರಿಗೆ ಅರ್ಜಿ ಹಾಕಲು ಆಹ್ವಾನಿಸಿದೆ.

      ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಗಳು ಮತ್ತದರ ಹುದ್ದೆಗಳ ಬಗ್ಗೆ ವಿವರಣೆ ಲಭ್ಯವಿದೆ. ಅಲ್ಲದೆ ಕಳೆದ ತಿಂಗಳು ಕಿರಿಯ ಅಭಿಯಂತರರ ಸಹಿತ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.

      ಕಳೆದ ವರ್ಷ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದ್ದ ವೇಳೆ ಗ್ರೂಪ್ ಡಿ ಮತ್ತು ಗ್ರೂಪ್ ಸಿ ಗಳಲ್ಲಿರುವ ಸುಮಾರು ಒಂದು ಲಕ್ಷ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದರ ಅರ್ಜಿ ಪ್ರಕ್ರಿಯೆ ಈ ವರ್ಷ ಜನವರಿಯಲ್ಲಿ ಪ್ರಾರಂಭವಾಗಿದೆ.

      ಕಂಪ್ಯೂಟರ್ ಆಧಾರಿತ ಎರಡನೇ ಹಂತದ ಪರೀಕ್ಷೆಯನ್ನು ಜನವರಿ 20, 22 ಮತ್ತು 23 ರಂದು ಆಯೋಜಿಸಲಾಗಿದೆ. ಗ್ರೂಪ್ ಡಿ ಗೆ ಸಂಬಂಧಿಸಿದ ಪರೀಕ್ಷೆಯ ಫಲಿತಾಂಶವನ್ನು ಫೆಬ್ರವರಿ ತಿಂಗಳಿನಲ್ಲಿ ಪ್ರಕಟಿಸುವುದಾಗಿ ತಿಳಿಸಲಾಗಿದೆ.

      ಹತ್ತನೇ ತರಗತಿ ಉತ್ತೀರ್ಣರಾದವರಿಗೆ ಪಶ್ಚಿಮ ರೈಲ್ವೆಯಿಂದ ವಿವಿಧ ವಿಭಾಗಗಳಲ್ಲಿ 3553 ಅಪ್ರೆಂಟಿಸ್ ಹುದ್ದೆಗಳಿಗೆ ಕರೆ ನೀಡಿದೆ. 2019 ರ ಜ.9 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ wr.indianrailways.gov.in  ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link