ನವದೆಹಲಿ:
ಭಾರತೀಯ ರೈಲ್ವೆಯಲ್ಲಿ ನೀಡುವ ಊಟದಲ್ಲಿ ಕೇವಲ ಹಲಾಲ್ ಪ್ರಮಾಣಪತ್ರ ಹೊಂದಿರುವ ಮಾಂಸವನ್ನು ಮಾತ್ರ ನೀಡಲಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈಲ್ವೆ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರಗಳೊಳಗೆ ವರದಿ ಸಲ್ಲಿಸಲು ಸೂಚಿಸಿದೆ.
ಈ ಸಂಬಂಧ ಸಲ್ಲಿಸಿದ ದೂರಿಗಳಲ್ಲಿ ಈ ಅಭ್ಯಾಸ ಹಿಂದೂಗಳು, ಸಿಖ್‌ರು ಮತ್ತು ಎಸ್‌ಸಿಯ ಸಮುದಾಯಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿರುವವರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಧಾರ್ಮಿಕ ನಂಬಿಕೆಗಳಿಗೆ ಸರಿ ಹೊಂದುವ ಆಹಾರದ ಆಯ್ಕೆಗಳು ಸಿಗುತ್ತಿಲ್ಲ ಎಂದು ಉಲ್ಲೇಖಿಸುತ್ತಾರೆ.
ಎನ್‌ಹೆಚ್‌ಆರ್‌ಸಿ ಈ ಬಗ್ಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದು, ಸಂವಿಧಾನದ 14, 15ನೇ (ಧರ್ಮ, ಜಾತಿ ತಾರತಮ್ಯ ನಿಷೇಧ), 19(1)(g) (ವೃತ್ತಿ ಸ್ವಾತಂತ್ರ‍್ಯ), 21 (ಗೌರವದೊಂದಿಗೆ ಜೀವನ ಹಕ್ಕು) ಮತ್ತು 25ನೇ (ಧಾರ್ಮಿಕ ಸ್ವಾತಂತ್ರ‍್ಯ) ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಗುರುತಿಸಿದೆ.








