ಮಂಗಳೂರು -ಮಡಗಾಂವ್‌ ನಡುವೆ ರೈಲು ಸಂಚಾರ ವ್ಯತ್ಯಯ….!

ಮಂಗಳೂರು

    ಹಳಿ ಅಳವಡಿಕೆ, ವಿದ್ಯತ್‌ ಅಳವಡಿಕೆ ಕಮಾಗಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತಿದೆ. ಹಾಗೆಯೇ ಇದೀಗ ಮಡಗಾಂವ್-ಕುಮಟಾ ವಿಭಾಗದ ನಡುವಿನ ರೈಲ್ವೆ ಕಾಮಗಾರಿ ಹಿನ್ನೆಲೆ ಈ ಭಾಗದಲ್ಲಿ ರೈಲು ಸೇವೆಯನ್ನು ರದ್ದು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಎಲ್ಲಿವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

    ಏಪ್ರಿಲ್‌ 18ರಂದು ಮಧ್ಯಾಹ್ನ 12:10 ಗಂಟೆಯಿಂದ 3:10 ಗಂಟೆವರೆಗೂ 3 ಗಂಟೆ ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಇದರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.

    ಮಂಗಳೂರು ಸೆಂಟ್ರಲ್‌-ಮಡಗಾಂವ್ ವಿಶೇಷ ರೈಲು (ರೈಲು ಸಂಖ್ಯೆ 06602) ಏಪ್ರಿಲ್‌ 18ರಂದು ಕಾರವಾರ ನಿಲ್ದಾಣದವರೆಗೂ ಸಂಚಾರ ಮಾಡಲಿದೆ. ಕಾರವಾರ-ಮಡಗಾಂವ್‌ ವಿಭಾಗದ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ. ಇನ್ನು ಮಡಗಾಂವ್ – ಮಂಗಳೂರು ಸೆಂಟ್ರಲ್ ವಿಶೇಷ ರೈಲು (ರೈಲು ಸಂಖ್ಯೆ 06601) ವಿಶೇಷ ರೈಲು ಸಂಚಾರವು ಏಪ್ರಿಲ್‌ 18ರಂದು ಮಡಗಾಂವ್ – ಕಾರವಾರ ವಿಭಾಗದ ನಡುವೆ ಭಾಗಶಃ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap