ಭಾರಿ ಮಳೆಗೆ ತತ್ತರಿಸಿದ ಹೈದರಾಬಾದ್…..!

ತೆಲಂಗಾಣ

      ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇದೇ ಮೊದಲ ಬಾರಿಗೆ ಈ ವರ್ಷದ ಮುಂಗಾರು ಮಳೆಯಲ್ಲಿ ಹೈದರಾಬಾದ್‌ಗೆ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು.

    ಕಳೆದ 26 ಗಂಟೆಗಳಲ್ಲಿ ಹೈದರಾಬಾದ್‌ನಲ್ಲಿ ಈ ನೈಋತ್ಯ ಮಾನ್ಸೂನ್‌ನ ಭಾರೀ ಮಳೆಯಾಗುವುದರೊಂದಿಗೆ, ರಾಜೇಂದ್ರ ನಗರ, ಕುಕಟ್‌ಪಲ್ಲಿ ಮತ್ತು ಮಲ್ಕಾಜ್‌ಗಿರಿಯ ತಗ್ಗು ಪ್ರದೇಶಗಳಲ್ಲಿನ ಹಲವಾರು ಕಾಲೋನಿಗಳು ಮುಳುಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ.

    ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು, ಜಿಹೆಚ್‌ಎಂಸಿ (GHMC) ಮತ್ತು ಇವಿಡಿಎಂ (EVDM) ತಂಡಗಳು ಸಂಪೂರ್ಣ ಅಲರ್ಟ್‌ನಲ್ಲಿವೆ ಮತ್ತು ವಿವಿಧ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗಳಿಗೆ ಸ್ಪಂದಿಸುತ್ತಿವೆ. ಸೋಮಾಜಿಗುಡ-ಪ್ಯಾರಡೈಸ್ ಮಾರ್ಗದ ರಸ್ತೆಗಳಲ್ಲಿ ತೀವ್ರ ಜಲಾವೃತವಾಗಿದ್ದ ಕಾರಣ ಪೊಲೀಸರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದರು.

    ಹಲವು ಕಡೆ ಟ್ರಾಫಿಕ್ ಸಂಚಾರ ದಟ್ಟಣೆ, ನೀರು ನಿಲ್ಲುವುದು ಮತ್ತು ಪೀಕ್ ಅವರ್‌ನಿಂದಾಗಿ ಎಸ್‌ಆರ್‌ನಗರ ಪಿಎಸ್, ಡಿಕೆ ರಸ್ತೆ, ಅಮೀರ್‌ಪೇಟ್ ಲಾಲ್ ಬಂಗಲೆಯಿಂದ ಗ್ರೀನ್ ಲ್ಯಾಂಡ್ಸ್ ಕಡೆಗೆ, ನೆಕ್ಲೇಸ್ ರೋಟರಿ ಮತ್ತು ಖೈರತಾಬಾದ್ ಫ್ಲೈಓವರ್‌ನಿಂದ ಖೈರತಾಬಾದ್ ಎಕ್ಸ್ ರೋಡ್‌ಗಳ ಕಡೆಗೆ ವಾಹನಗಳ ಚಲನೆ ನಿಧಾನವಾಗಿತ್ತು. ಉತ್ತರ ಕನ್ನಡದ ಜಿಲ್ಲೆಯಲ್ಲಿ ಶೇಕಡಾ 70ರಷ್ಟು ಮಳೆ ಕೊರತೆ, ಬಿಸಿಲ ಧಗೆಗೆ ಬಾಯ್ತೆರೆದ ಭೂಮಿ, ತಾಲೂಕುವಾರು ಮಾಹಿತಿ ಸೋಮವಾರ ಸಂಜೆಯವರೆಗೂ ಸಾಧಾರಣ ಮಳೆಯಾಗಿದ್ದರೂ, ನಂತರ ಮಳೆ ಬಿರುಸುಪಡೆದುಕೊಂಡಿದೆ.

    ಮಂಗಳವಾರ ಬೆಳಗಿನ ಜಾವದ ಹೊತ್ತಿಗೆ ಜೋರಾಯಿತು. ಇದರೊಂದಿಗೆ, ಕುಕಟ್‌ಪಲ್ಲಿ ಮತ್ತು ಸೆರಿಲಿಂಗಂಪಲ್ಲಿಯಂತಹ ಕೆಲವು ಪ್ರದೇಶಗಳಲ್ಲಿ 1.30 ಗಂಟೆಗಳ ಅವಧಿಯಲ್ಲಿ 5 ಸೆಂ.ಮೀ ಮಳೆ ದಾಖಲಾಗಿದೆ. ಐಎಂಡಿ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ, ಅಂದರೆ, ಸೋಮವಾರ ಬೆಳಿಗ್ಗೆ 8.30 ರಿಂದ ಮಂಗಳವಾರ 8.30 ರವರೆಗೆ, ಮಿಯಾಪುರದಲ್ಲಿ ಅತಿ ಹೆಚ್ಚು 14.7 ಸೆಂ.ಮೀ ಮಳೆ ದಾಖಲಾಗಿದೆ, ನಂತರ ಹೈದರ್‌ನಗರ (14.3 ಸೆಂ.ಮೀ) ಮತ್ತು ಶಿವರಾಮಪಲ್ಲೆ (13 ಸೆಂ.ಮೀ) ಮಳೆಯಾಗಿದೆ.

   ಹೈದರಾಬಾದ್ ಹೊರತುಪಡಿಸಿ, ರಾಜಣ್ಣ ಸಿರ್ಸಿಲ್ಲಾ, ಮೇದಕ್ ಮತ್ತು ಸಂಗಾರೆಡ್ಡಿ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ದಾಖಲಾಗಿದೆ. ತೆಲಂಗಾಣದಲ್ಲಿ 6 ಸಾವು ಹೈದರಾಬಾದ್ ಮತ್ತು ರಾಜ್ಯದ ಕೆಲವು ಭಾಗಗಳಲ್ಲಿ ಮಂಗಳವಾರ ಸುರಿದ ಭಾರೀ ಮಳೆಯ ಪರಿಣಾಮವಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ.

    ನಾಲ್ಕು ವರ್ಷದ ಮಿಥುನ್ ಮಂಗಳವಾರ ಬೆಳಿಗ್ಗೆ 11.30 ರ ಸುಮಾರಿಗೆ ಪ್ರಗತಿನಗರದ ತೆರೆದ ನಾಲಾದಲ್ಲಿ ಬಿದ್ದು ಕೊಚ್ಚಿಹೋಗಿರುವುದಾಗಿ ವರದಿಯಾಗಿದೆ. ಬಾಲಕ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದರೂ, ತೆರೆದ ಚರಂಡಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ರಾಜ್ಯ ವಿಪತ್ತು ಸ್ಪಂದನಾ ಪಡೆಯ ತಂಡಗಳು ನಾಲ್ಕು ಗಂಟೆಗಳ ಹುಡುಕಾಟದ ನಂತರ ಸ್ಥಳೀಯ ಟ್ಯಾಂಕ್ ತುರಕಾ ಚೆರುವುದಿಂದ ಮೃತದೇಹವನ್ನು ಹೊರತೆಗೆಯಲಾಯಿತು.

    ಗಾಂಧಿನಗರದ ನಾಲೆಯಲ್ಲಿ ಕೊಚ್ಚಿ ಹೋಗಿರುವ 55 ವರ್ಷದ ಲಕ್ಷ್ಮಿ ಅವರ ದೇಹ ಎರಡು ದಿನ ಕಳೆದರೂ ಪತ್ತೆಯಾಗಿಲ್ಲ. ಸೋಮವಾರ ಸುಮಾರು 100 ಸಿಬ್ಬಂದಿ ಆಕೆಯನ್ನು ಪತ್ತೆ ಹಚ್ಚಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಬಾಲನಗರದಲ್ಲಿ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

    ಜಯಶಂಕರ್-ಭೂಪಾಲಪಲ್ಲಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತ, ಇಬ್ಬರು ಕೃಷಿ ಕಾರ್ಮಿಕರು ಸೇರಿದಂತೆ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಜಿ ರಾಜೇಶ್ವರ ರಾವ್ (45), ಸಿ ಹೆಚ್ ಸರಿತಾ (30) ಮತ್ತು ಎನ್ ಸುಮತಾ (32) ಎಂದು ಗುರುತಿಸಲಾಗಿದೆ. ಸಂಗಾರೆಡ್ಡಿಯ ಗುಮ್ಮಡಿದಾಳ ಮಂಡಲದ ಮಂಜಪುರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap