ರಾಜಲಕ್ಷ್ಮಿ ಕೋಡಿಬೆಟ್ಟು ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ ಪ್ರದಾನ

ಬೆಂಗಳೂರು:

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೊಡಮಾಡುವ ಮಂಗಳ ವರ್ಗೀಸ್ ಪ್ರಶಸ್ತಿಯನ್ನು ಪ್ರಜಾವಾಣಿಯ ಹಿರಿಯ ಪತ್ರಕರ್ತೆ ಕೆ.ರಾಜಲಕ್ಷ್ಮಿ ಕೋಡಿಬೆಟ್ಟು ಅವರಿಗೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪ್ರದಾನ ಮಾಡಿದರು.ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಅವರು ಅನಾರೋಗ್ಯದಿಂದ ಬರಲಾಗದ ಕಾರಣ ಮಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

   ಕರಾವಳಿ ಭಾಗದ ದೈವರಾಧನೆ ಕುರಿತು ರಾಜಲಕ್ಷ್ಮಿ ಅವರು ಸುಧಾ ವಾರಪತ್ರಿಕೆಗೆ ಬರೆದಿದ್ದ ಲೇಖನ ಮುಖಪುಟದಲ್ಲಿ  ಪ್ರದಾನವಾಗಿ ಪ್ರಕಟಗೊಂಡಿದ್ದು ಕೆಯುಡಬ್ಲ್ಯೂಜೆ ಪ್ರಶಸ್ತಿಗೆ ಆಯ್ಕೆಯಾಗಿತ್ತು.ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಾಸ್ಕರ ರೈ ಕಟ್ಟ, ರಾಜಲಕ್ಷ್ಮಿ ಪತಿ ಗಣಪತಿ ಭಟ್ , ಪ್ರವೀಣ್ ಕುಮಾರ್ ಕೋಡಿಯಾಲಬೈಲು ಹಾಜರಿದ್ದರು

Recent Articles

spot_img

Related Stories

Share via
Copy link