ಸೂಪರ್​ ಸ್ಟಾರ್​ ರಜನಿಕಾಂತ್​ಗೆ 51ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ!!

ನವ ದೆಹಲಿ :

     ಸಿನಿರಂಗದ ಅತ್ಯುನ್ನತ ಗೌರವವಾದ 51ನೇ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನ ನಟ ರಜನಿಕಾಂತ್‌ ಅವರಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ಮಾಹಿತಿ ನೀಡಿದ್ದಾರೆ.

      ಈ ಸಂಬಂಧ ಟ್ವಿಟರ್​​ನಲ್ಲಿ ಮಾಹಿತಿ ನೀಡಿರುವ ಜಾವಡೇಕರ್​​ ‘ 2020ನೇ ಸಾಲಿನ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ರಜನಿಕಾಂತ್​ರ ಹೆಸರನ್ನ ಘೋಷಿಸುತ್ತಿರೋದಕ್ಕೆ ಸಂತಸವಾಗುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕನಾಗಿ ಸಿನಿರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಅಪಾರ. ತೀರ್ಪುಗಾರರಾದ ಗಾಯಕಿ ಆಶಾ ಬೋಸ್ಲೆ, ನಿರ್ಮಾಪಕ ಸುಭಾಷ್​ ಘಾಯ್​, ನಟ ಮೋಹನ್​ಲಾಲ್​, ಗಾಯಕ ಶಂಕರ್​ ಮಹದೇವನ್​​ ಹಾಗೂ ಹಿರಿಯ ನಟ ಬಿಸ್ವಜೀತ್​ ಚಟರ್ಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

     ಭಾರತೀಯ ಸಿನೆಮಾ ರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾ ಸಾಹೇಬ್, 1913ರಲ್ಲಿ ನಟರಾಗಿ ಭಾರತೀಯ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರ ಹೆಸರಿನಲ್ಲಿ ಕೊಡಮಾಡುವ ಈ ಪ್ರಶಸ್ತಿ ಭಾರತೀಯ ಸಿನೆಮಾ ರಂಗದ ಶ್ರೇಷ್ಟ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಸಿನೆಮಾರಂಗದ ಶ್ರೇಷ್ಟ ಮಾನ್ಯರಿಗೆ, ಭಾರತೀಯ ಸಿನಿ ರಂಗಕ್ಕೆ ನೀಡಿದ ಅಪಾರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ಸ್ವರ್ಣ ಕಮಲ ಪದಕ ಹಾಗೂ ಹತ್ತು ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.

     ಈ ಪ್ರಶಸ್ತಿಯನ್ನು ಕಳೆದ ವರ್ಷ ಘೋಷಿಸಬೇಕಾಗಿತ್ತು. ಕೋವಿಡ್ ಸಾಂಕ್ರಾಮಿಕ ಸೋಂಕು ಹಾಗೂ ಲಾಕ್ಡೌನ್ ನ ಕಾರಣದಿಂದಾಗಿ ವಿಳಂಬವಾಗಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap