ಫಿಟ್‌ ಆದ ವೇಗಿ ಮಾಯಾಂಕ್‌; ರಾಜಸ್ಥಾನ್‌ ವಿರುದ್ಧ ಕಣಕ್ಕೆ

ಜೈಪುರ:

      ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ವೇಗಿ ಮಾಯಾಂಕ್‌ ಯಾದವ್‌ ಸಂಪೂರ್ಣವಾಗಿ ಚೇತರಿಸಿಕೊಂಡು ಐಪಿಎಲ್‌ ಆಡಲು ಸಜ್ಜಾಗಿದ್ದಾರೆ. ಕಾಲಿನ ಬೆರಳಿನ ಗಾಯಕ್ಕೀಡಾಗಿದ್ದ ಅವರು ಇದೀಗ ಚೇತರಿಸಿಕೊಂಡು ಈಗಾಗಲೇ ಜೈಪುರದಲ್ಲಿ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಶನಿವಾರ ನಡೆಯುವ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.

    22 ವರ್ಷದ ಮಾಯಾಂಕ್‌ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗಂಟೆಗೆ 150 ಕೀ.ಮೀ. ವೇಗದಲ್ಲಿ ಎಸೆತವನ್ನಿಕ್ಕುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅವರ ಆಗಮನದಿಂದ ತಂಡ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಮಯಾಂಕ್‌ ತಂಡಕ್ಕೆ ಮರಳಿದ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

   ಸದ್ಯ ಲಕ್ನೋ ತಂಡ ಆಡಿದ 7 ಪಂದ್ಯಗಳಲ್ಲಿ ನಾಲ್ಕು ಗೆಲುವು, ಮೂರು ಸೋಲಿನಿಂದೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ಆಟಗಾರ ನಿಕೋಲಸ್‌ ಪೂರನ್‌ 357 ರನ್‌ ಬಾರಿಸಿ ಅತ್ಯಧಿಕ ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನಿಯಾಗಿದ್ದಾರೆ. ಮಾಯಾಂಕ್‌ ಯಾದವ್‌ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸು ತ್ತಿದ್ದಾರೆ. ಸೀನಿಯರ್‌ ಬೌಲರ್‌ಗಳಾದ ಇಶಾಂತ್‌ ಶರ್ಮ, ನವದೀಪ್‌ ಸೈನಿ ಅವರು ನೀಡಿದ ಸಲಹೆ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು ಎಂದು ಹಿಂದೊಮ್ಮೆ ಮಾಯಾಂಕ್‌ ಹೇಳಿದ್ದರು. 

    ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಮಾಯಾಂಕ್‌ ನಂತರ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಇದಾದ ಬಳಿಕ ಕಾಲಿನ ಬೆರಳಿನ ಗಾಯಕ್ಕೀಡಾದರು. ಒಟ್ಟಾರೆ ಅವರು ಪಂದ್ಯವನ್ನಾಡುದಕ್ಕಿಂತ ಗಾಯದ ಸಮಸ್ಯೆಗೆ ಸಿಲುಕುತ್ತಿರುವುದೇ ಹೆಚ್ಚಾಗಿದೆ.

Recent Articles

spot_img

Related Stories

Share via
Copy link