ಮಧುಗಿರಿ:
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಣೆ ಮಾಡಿದ ಬಜೆಟ್‍ನಲ್ಲಿ ಮಧುಗಿರಿಗೆ ಯಾವುದೆ ಮನ್ನಣೆ ಸಿಕ್ಕಿಲ್ಲ ಭಾರಿ ಅನ್ಯಾಯ ಎಂದು ವಿ.ಪ ಸದಸ್ಯ ರಾಜೇಂದ್ರ ರಾಜಣ್ಣ ಆರೋಪಿಸಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ ಸದಸ್ಯತ್ವ ಡಿಜಿಟಲ್ ನೋಂದಣಿ ಕಾರ್ಯಕ್ರಮದ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಬಾರಿ ಬಜೆಟ್ ಮೇಲೆ ತುಂಬಾ ವಿಶ್ವಾಸವಿತ್ತು. ಮಧುಗಿರಿ ಜಿಲ್ಲಾ ಕೇಂದ್ರ ವಾಗಿ ಘೋಷಣೆಯಾಗುತ್ತೆ, ಬೊಮ್ಮಾಯಿವರು ಪ್ರವಾಸೋದ್ಯಮ ಕೇಂದ್ರವನ್ನಾಗಿ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ನಮ್ಮ ಮಧುಗಿರಿಗೆ ತುಂಬ ಅನ್ಯಾಯವಾಗಿದ್ದು, ಜಿಲ್ಲೆಗೆ ನೀಡಿರುವ ಕೊಡುಗೆ ಏನೇನೂ ಇಲ್ಲ ಎಂದು ವಿಪ ಸದಸ್ಯ ಅಸಮಾಧಾನ ಹೊರಹಾಕಿದರು.
ರಾಜ್ಯದ ಬಜೆಟ್‍ನಲ್ಲಿ 2 ಲಕ್ಷದ 66 ಕೋಟಿಯಷ್ಟು ಆಯ-ವ್ಯಯ ಘೋಷಣೆ ಮಾಡಿದ್ದು, ನಮ್ಮ ಜಿಲ್ಲೆಗೆ ಶೂನ್ಯ ಕೊಡುಗೆಯಾಗಿದೆ. ಮಧುಗಿರಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ರೈಲ್ವೇ, ಎತ್ತಿನಹೊಳೆ ಕಾಮಗಾರಿಗೆ ಕಳೆದ ಎಂಟು ತಿಂಗಳಿಂದ ಹಣ ಬಿಡುಗಡೆಯಾಗದೆ ಕಾಮಗಾರಿ ಸ್ಥಗಿತವಾಗಿದೆ. ಮುಖ್ಯಮಂತ್ರಿಗಳ ಬಜೆಟ್ ಕೇವಲ ಮುಂದಿನ ಚುನಾವಣೆಗೆ ಅವರಿಗೆ ಲಾಭದಾಯಕವಾಗುವÀಂತೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ನಮ್ಮ ಜಿಲ್ಲೆಯ ಮಂತ್ರಿಗಳು, ಸಂಸದರು ಚಕಾರವೆತ್ತಿಲ್ಲ. ಅವರಿಗೆ ಬೇಕಾದಂತೆ ಅವರ ಕ್ಷೇತ್ರ ವ್ಯಾಪ್ತಿಗೆ ಅನುದಾನ ಪಡೆದುಕೊಂಡಿದ್ದಾರೆ.
ಮಾಜಿ ಶಾಸಕರಾದ ಕೆ.ಎನ್ ರಾಜಣ್ಣನವರ ಅವಧಿಯಲ್ಲಿ ಮಧುಗಿರಿಯು ಜಿಲ್ಲೆಯಾಗುವ ಪೂರಕ ವಾತಾವರಣ ನಿರ್ಮಾಣ ಮಾಡಿದ್ದರು. ರಾಜ್ಯದ ಬಜೆಟ್ ಮೇಲೆ ತುಂಬಾ ನೀರಿಕ್ಷೆ ಇತ್ತು. ಆದರೆ ಯಾವುದೆ ಮನ್ನಣೆ ಸಿಕ್ಕಿಲ್ಲ, ಈ ಬಗ್ಗೆ ವಿಧಾನ ಪರಿಷತ್ ನಲ್ಲಿ ಪ್ರಶ್ನೆ ಮಾಡುತ್ತೇನೆ. ನಮ್ಮ ತಾಲ್ಲೂಕನ್ನು ಜಿಲ್ಲಾ ಕೇಂದ್ರ ಮಾಡುವುದು, ಏಕಶಿಲಾ ಬೆಟ್ಟಕ್ಕೆ ರೋಪ್‍ವೇ, ಕೇಬಲ್ ಕಾರ್ ಸೇರಿದಂತೆ ಮಧುಗಿರಿಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಒತ್ತಾಯಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಆದಿನಾರಾಯಣ ರೆಡ್ಡಿ, ತಾಪಂ ಮಾಜಿ ಸದಸ್ಯ ಟಿ.ಪಿ.ಎಸ್ ತಿಮ್ಮರಾಜು, ವಿಎಸ್ಸೆಸ್ಸೆಎನ್ ಕಾರ್ಯದರ್ಶಿಗಳಾದ ಶ್ರೀನಿವಾಸ್, ಪ್ರಸಾದ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ವಿ ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷ ರಾಜೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಎಸ್ಡಿ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜೆ ರಂಗನಾಥ್, ಟಿ.ಜೆ ಗೋಪಾಲಪ್ಪ, ಮಕ್ತಿಯಾರ್, ಮುಖಂಡರಾದ ಬಾಲಾಜಿ, ಮೈಲಾರಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
