ಹಾಸ್ಯ ನಟ ರಾಜೇಂದ್ರ ಪ್ರಸಾದ್ ಮಗಳು ಹೃದಯಾಘಾತದಿಂದ ನಿಧನ

ತೆಲಂಗಾಣ :

   ತೆಲುಗಿನ ಜನಪ್ರಿಯ ಹಾಸ್ಯನಟ ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ (38) ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶುಕ್ರವಾರ (ಅಕ್ಟೋಬರ್ 5) ಹೃದಯಾಘಾತ ಆಗಿತ್ತು. ಅವರನ್ನು ಕುಟುಂಬಸ್ಥರು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯತ್ರಿ ಇಂದು (ಅಕ್ಟೋಬರ್ 6) ಮೃತಪಟ್ಟಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಈಗ ಮಗ ಮಾತ್ರ ಉಳಿದುಕೊಂಡಿದ್ದಾನೆ. ಮಗಳ ಸಾವಿನಿಂದ ರಾಜೇಂದ್ರ ಪ್ರಸಾದ್ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅನೇಕ ಗಣ್ಯರು ಬಂದು ಸಂತಾಪ ಸೂಚಿಸಿದ್ದಾರೆ.

   ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ರಾಜೇಂದ್ರ ಪ್ರಸಾದ್ ವೃತ್ತಿ ಜೀವನ ಆರಂಭಿಸಿದರು. ವರ್ಷಗಳು ಕಳೆದಂತೆ ಅವರಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಟಾಲಿವುಡ್​ನ ಖ್ಯಾತ ಹಾಸ್ಯನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ರಾಜೇಂದ್ರ ಪ್ರಸಾದ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಅವರ ಕುಟುಂಬದಿಂದ ಯಾರೂ ಇಂಡಸ್ಟ್ರಿಗೆ ಬರಲಿಲ್ಲ. 2018ರಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್​ನಲ್ಲಿ ಅವರು ತಮ್ಮ ಮಗಳ ಬಗ್ಗೆ ಮಾತನಾಡಿ, ಭಾವುಕರಾಗಿದ್ದರು.
   ಈ ಹಿಂದೆ ರಾಜೇಂದ್ರ ಪ್ರಸಾದ್ ಅವರು ‘ಬೇವಾರ್ಸ್’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಈ ಸಿನಿಮಾದಲ್ಲಿ ಅಮ್ಮನ ಮೇಲೆ ಒಂದು ಹಾಡು ಇದೆ. ತಾಯಿ ಇಲ್ಲದವನು ತನ್ನ ಮಗಳಲ್ಲಿ ತಾಯಿಯನ್ನು ಕಾಣುತ್ತಾನೆ. ನಾನು ಹತ್ತು ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ಮಗಳಲ್ಲಿ ಅಮ್ಮನನ್ನು ಕಂಡೆ. ಈ ಸಿನಿಮಾದ ಬಳಿಕ ಮಗಳನ್ನು ಮನೆಗೆ ಕರೆದು ಅಮ್ಮ ಹಾಡನ್ನು ನಾಲ್ಕು ಬಾರಿ ಕೇಳಿದ್ದೇನೆ’ ಎಂದರು ರಾಜೇಂದ್ರ ಪ್ರಸಾದ್ ಹೇಳಿದ್ದರು.

Recent Articles

spot_img

Related Stories

Share via
Copy link