ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜೇಂದ್ರ ರಾಜಣ್ಣ ಅವರಿಂದ ಸನ್ಮಾನ ….!

ಮಧುಗಿರಿ:

    ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 78 ನೇ ಸ್ವತಂತ್ರ ದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಧ್ವಜಾರೋಹಣೆಯನ್ನು ನೇರವೇರಿಸಿ ಶಾಲಾ ಮಕ್ಕಳು ಹಾಗೂ ಮಾಜಿ ಸೈನಿಕರು , ಪೊಲೀಸ್ , ಗೃಹರಕ್ಷ ದಳದ ವತಿಯಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು.

    ಸ್ವತಂತ್ರ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಕೆ ಎನ್ ಆರ್ ಮತ್ತು ಆರ್ ಆರ್ ಅಭಿಮಾನಿ ಬಳಗದ ವತಿಯಿಂದ ಸಿಹಿ ತಿನಿಸುಗಳನ್ನು ವಿತರಿಸಲಾಯಿತು. ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಬಂಗಾರದ ಪದಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ರಾಜೇಂದ್ರ ರಾಜಣ್ಣನವರು ಸನ್ಮಾನಿಸಿದರು.

    ಮುಖ್ಯ ಭಾಷಣಕಾರರಾಗಿ ನಿವೃತ್ತ ಪ್ರೂ. ಮುನೀಂದ್ರಕುಮಾರ್ ಮಾತನಾಡಿದರು.ಸಮಾರಂಭದಲ್ಲಿ ಪೊಲೀಸ್ ಉಪ ಆರಕ್ಷ ಅಧೀಕ್ಷ ರಾಮಚಂದ್ರಪ್ಪ , ತಹಸೀಲ್ದಾರ್ ಸಿಗಬತ್ ವುಲ್ಲಾ , ಇ ಓ ಲಕ್ಷಣ್ , ಬಿಇಓ ಹನುಮಂತರಾಯಪ್ಪ , ಮುಖಂಡರಾದ ಎಂ ಎಸ್ ಮಲ್ಲಿಕಾರ್ಜುನಯ್ಯ , ಎಂ ಕೆ ನಂಜುಂಡಯ್ಯ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.