ಜನರ ಒಲವು ಕಾಂಗ್ರೆಸ್‍ಗಿದೆ ರಾಜೇಂದ್ರ ಗೆಲುವು ನಿಶ್ಚಿತ

ತುಮಕೂರು:

ಜನರ ಒಲವು ಕಾಂಗ್ರೆಸ್ ಪರವಾಗಿದ್ದು, ತುಮಕೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಗೆಲುವು ನಿಶ್ಚಿತ. ಬೆಲೆಏರಿಕೆ, ರೈತ ಪ್ರತಿಭಟನೆಗಳು ಬಿಜೆಪಿಗೆ ವ್ಯತಿರಿಕ್ತವಾಗಿದ್ದು, ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯಗಳಲ್ಲಿ ಜನತೆ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಲಿದ್ದಾರೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೇಂದ್ರ ಅವರಿಗೆ ಜನಪರ ಕಾಳಜಿ ಇದೆ . ಜನರಿಗೋಸ್ಕರ ಹಗಲಿರುಳು ಶ್ರಮ ವಹಿಸಿ ಕೆಲಸ ಮಾಡುತ್ತಾರೆ , ಅವರ ಇಡೀ ಕುಟುಂಬ ಜನಸೇವೆಗೆ ಅರ್ಪಿಸಿಕೊಂಡಿದೆ . ಹೀಗಾಗಿ ಅವರ ಗೆಲುವು ಅಭಿವೃದ್ಧಿಯ ಸಂಕೇತವಾಗಲಿದೆ. ಹೇಮಾವತಿ ನೀರು ಹರಿವಿನ ವಿಷಯದಲ್ಲಿ ಸಂಕಷ್ಟ ಎದುರಿಸುತ್ತಿದ್ದ ತುಮಕೂರು ಜಿಲ್ಲೆಯ ಜನತೆಗೆ ಸಿದ್ದರಾಮಯ್ಯ ಅವರ ಕಾಲದಲ್ಲಿ ನಾಲಾ ಆಧುನೀಕರಣ ಮಾಡಿ ಸರಾಗವಾಗಿ ನೀರು ಹರಿಯುವಂತಾಯಿತು ಎಂದರು.

700ಕ್ಕೂ ಹೆಚ್ಚು ರೈತರು ಮೃತಪಟ್ಟರೂ ಎಚ್ಚೆತ್ತುಕೊಳ್ಳದ ಸರ್ಕಾರ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳ ಉಪಚುನಾವಣೆಯಲ್ಲಿ ಸೋಲು ಕಾಣುತ್ತಲೇ ಪೆಟ್ರೋಲ್, ಡೀಸೆಲ್ ಸುಂಕ ಕಡಿಮೆಯಾಡಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿತು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯೇ ನಮಗೆ ಎದುರಾಳಿಯಾಗಿದ್ದು, ಜೆಡಿಎಸ್ ಹಣಬಲವುಳ್ಳ ಅಭ್ಯರ್ಥಿ ಹಾಕಿ ಚುನಾವಣೆಗೆ ಮುಂದಾಗಿದೆ ಎಂದು ದೂರಿದರು.

ಜೆಡಿಎಸ್‍ನಲ್ಲಿ ಉಸಿರುಕಟ್ಟಿದ ವಾತಾವರಣದ ಕಾರಣಕ್ಕೆ ನಾನು ಸೇರಿ ಹಲವು ನಾಯಕರುಪಕ್ಷ ತೊರೆಯುವಂತಾಯಿತು ಎಂದ ಚೆಲುವರಾಯಸ್ವಾಮಿ ಅವರು ತುಮಕೂರಿನಲ್ಲಿ ಕೆಎಎಸ್ ಅಧಿಕಾರಿಯೊಬ್ಬರನ್ನು ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಮಾಡಿ ಚುನಾವಣೆಗೆ ನಿಲ್ಲಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಕೇವಲ 10 ವರ್ಷದಲ್ಲಿ 500 ಕೋಟಿ ರೂ. ಆಸ್ತಿ ಮಾಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಆಸ್ತಿ ಮಾಡುವುದಾದರೂ ಹೇಗೆ ಎನ್ನುವುದು ಆಶ್ಚರ್ಯವಾಗಿದೆ. ಹಣದ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದು, ಅಪರಾಧ ಹಿನ್ನೆಲೆಯ ಘೋಷಣೆಯಲ್ಲಿಕೆಲವು ಕೇಸ್‍ಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಕಣದಿಂದ ಹಿಂದೆ ಸರಿಯಬಹದು: ಚುನಾವಣೆ ಸಂದರ್ಭದಲ್ಲಿ ದೇವೇಗೌಡರು-ಪ್ರಧಾನಿ ಮೋದಿ ಭೇಟಿ ಮಾಡಿರುವ ಉದ್ದೇಶವಾದರೂ ಏನು?. ಮೇಲ್ಮನೆ ಚುನಾವಣೆವೇಳೆ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಇದು ಖಚಿತಪಡಿಸುತ್ತಿದ್ದು, ತುಮಕೂರು ಜಿಲ್ಲೆಯಲ್ಲೂ ಜೆಡಿಎಸ್‍ನವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಒಕ್ಕಲಿಗ ಸಮುದಾಯ ರಾಜಕೀಯವಾಗಿ ಜಾಗೃತ ಸಮುದಾಯವಾಗಿದ್ದು, ಯಾರು ಸಮುದಾಯದ ಹಿತವನ್ನು ನೈಜವಾಗಿ ಕಾಯುತ್ತಾರೆ. ಅವರ ಬೆನ್ನಿಗೆ ಬಲವಾಗಿ ನಿಲ್ಲುತ್ತಾರೆ. ಬೆಳ್ಳಾವಿ,ಮಧುಗಿರಿಯಲ್ಲಿ ಹಿಂದೆ ರಾಜಣ್ಣ ಅವರನ್ನು ಸಮುದಾಯ ಬೆಂಬಲಿಸಿದ್ದೇ ಸಾಕ್ಷಿ. ಜನಸೇವೆಯಲ್ಲಿ ಮುಂಚೂಣಿಯಲ್ಲಿರುವ ರಾಜೇಂದ್ರ ಅವರಿಗೂ ಈ ಬಾರಿ ಒಕ್ಕಲಿಗ ಸಮುದಾಯದ ಸದಸ್ಯರ ಮತಗಳು ಪಕ್ಷಾತೀತವಾಗಿ ರಾಜೇಂದ್ರ ಅವರಿಗೆ ಬರಲಿದೆ.
-ಚೆಲುವರಾಯಸ್ವಾಮಿ, ಮಾಜಿ ಸಚಿವ.

ಅಪಪ್ರಚಾರಕ್ಕೆ ಕಿವಿಗೊಡಬೇಡಿ:

                         ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ಇದೆ. ಒಗ್ಗಟ್ಟಿಲ್ಲವೆಂದು ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಕಾಂಗ್ರೆಸ್‍ನಲ್ಲಿ ಸಣ್ಣ ಕಾರ್ಯಕರ್ತರಿಂದ ಹಿಡಿದು ಹಿರಿಯ ಮುಖಂಡರವರೆಗೂ ಒಗ್ಗಟ್ಟಿನಿಂದ ಮೇಲ್ಮನೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮತದಾರರು ವದಂತಿಗೆ ಕಿವಿಗೊಡಡಬಾರದು. ಜೆಡಿಎಸ್ ಅಭ್ಯರ್ಥಿಯಾದರೂ ತುಮಕೂರಿನವರು. ಆದರೆ ಬಿಜೆಪಿ ಅಭ್ಯರ್ಥಿ ಅಡ್ರೆಸ್ ಇಲ್ಲದವರಾಗಿದ್ದು.

              ನಾವೇ ನೋಡಿಲ್ಲ ಅಂದ ಮೇಲೆ ಮತದಾರರಿಗೆ ಅವರು ಗೊತ್ತೇ ಇಲ್ಲ. ಕಾಂಗ್ರೆಸ್‍ನವರು ದೇವೇಗೌಡರು ಸೋಲಿಸಿದರು ಎಂದು ಜೆಡಿಎಸ್ ಆರೋಪಿಸಿದ್ದು ಅವರ ಮಾತಲ್ಲಿ ಹುರುಳಿಲ್ಲ. ಪಕ್ಷಾತೀತ, ಜಾತ್ಯಾತೀತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಬೇಕೆಂಬುದು ನಮ್ಮ ಒತ್ತಾಯವಾಗಿದ್ದು, ಸೋತಾಗಲು ಗೆದ್ದಾಗಲೂ ಒಂದೇ ರೀತಿ ಜನಸೇವೆ ಮಾಡುವವರನ್ನು ಗ್ರಾಪಂ, ನಗರಸ್ಥಳೀಯ ಸಂಸ್ಥೆ ಸದಸ್ಯರು ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ಜಿಲ್ಲೆಯ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ, ಟಿ.ಬಿ.ಜಯಚಂದ್ರ, ಎಸ್.ಪಿ.ಮುದ್ದಹನುಮೇಗೌಡ ಅವರ ಆದಿಯಾಗಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಅಭ್ಯರ್ಥಿಯಾದ ನನ್ನ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸುತ್ತಿದ್ದು, ಚುನಾವಣೆ ನನಗೆ ಹೊಸದಲ್ಲ. ಕಳೆದ ಬಾರಿ ಪರಾಭವಗೊಂಡಿದ್ದೆ. ಈಗಾಗಲೇ ಎರಡು ಬಾರಿ ಗ್ರಾಪಂ ಸದಸ್ಯರು ಸ್ಥಳೀಯಸಂಸ್ಥೆ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದ್ದು, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆ, ಪಕ್ಷ ಸಂಘಟನೆ ಎಲ್ಲವೂ ಕಾಂಗ್ರೆಸ್‍ಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ. ಆರ್.ರಾಜೇಂದ್ರ ಕಾಂಗ್ರೆಸ್ ಅಭ್ಯರ್ಥಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link