ತಮಿಳಿನ ನಟಿಗೆ ರಜನಿಕಾಂತ್‌ ವಾರ್ನಿಂಗ್‌ : ಕಾರಣ ಗೊತ್ತಾ…?

ಚೆನ್ನೈ:

    18 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಹೀಗೆ ಡಿವೋರ್ಸ್‌ ಪಡೆಯುತ್ತಿರುವುದಕ್ಕೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದರು.

  ರಜನಿಕಾಂತ್‌ ಹಾಗೂ ಧನುಷ್‌ ಮನೆಯವರು ಇಬ್ಬರನ್ನೂ ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್‌ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ.

 

  ಧನುಷ್‌ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ಇದಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರು ಎಂಬುದನ್ನು ರಿವೀಲ್‌ ಮಾಡಿದ್ದಾರೆ.

  ಧನುಷ್​ ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ಧನುಷ್​ ಅವರ ಮಾವ ರಜನಿಕಾಂತ್​ಗೆ ತಿಳಿದಿತ್ತು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

    ‘ಧನುಷ್ ಕುಟುಂಬಸ್ಥನಾಗಿದ್ದು, ಆತನಿಗೂ ಪತ್ನಿ ಮತ್ತು ಮಕ್ಕಳಿದ್ದಾರೆ. ಅತನೊಂದಿಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ’ ಎಂದು ರಜನೀಕಾಂತ್‌ ಅಮಲಾಗೆ ಬೆದರಿಕೆ ಹಾಕಿದ್ದರಂತೆ. ಈ ಘಟನೆಯ ನಂತರ ಅಮಲಾಗೆ ತಮಿಳಿನಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಅವರು ಕೇರಳಕ್ಕೆ ಹೋಗಿದ್ದಾರೆ ಎಂದು ಸೆಯ್ಯಾರು ಬಾಲು ಹೇಳಿದ್ದಾರೆ.

    ವೇಳಯಿಲ್ಲ ಪಟ್ಟದಾರಿ ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುವಾಗಿ ಇಬ್ಬರ ನಡುವೆ ಸ್ನೇಹ ಉಂಟಾಗಿ, ನಂತರ ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್‌ಗೆ ಕೂಡಾ ತಿಳಿದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap