ನನ್ನ ತಂಟೆಗೆ ಬಂದ್ರೆ ನಿನ್ನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡ್ತೀನಿ : ರಾಜು ಕಾಗೆ

ರಾಮನಗರ

    ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಸಂಚಾರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ವೇಗದ ಮಿತಿಯನ್ನೂ ನಿಗದಿಪಡಿಸಿದೆ. ಇಷ್ಟೆಲ್ಲ ಆದಮೇಲೂ ಸಂಚಾರ ನಿಯಮಗಳ ಉಲ್ಲಘನೆಯಾಗುತ್ತಿರುವುದನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ಕ್ಯಾಮರಾಗಳು, ಸೆನ್ಸರ್​ಗಳನ್ನು ಅಳವಡಿಸಲಾಗಿದೆ. ಆದಾಗ್ಯೂ, ಕಳೆದ ಕೆಲವೇ ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ನಿಯಮ ಉಲ್ಲಂಘಿಸಿದ್ದಾರೆ ಎಂದು ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

    ಹೆದ್ದಾರಿಯಲ್ಲಿ ಗಂಟೆಗೆ 130 ಕಿಲೋಮೀಟರ್​ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗುತ್ತದೆ. ವಾಹನ ಸೀಜ್ ಮಾಡಿ, ಲೈಸೆನ್ಸ್ ಕೂಡ ಅಮಾನತಿನಲ್ಲಿಡಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಈವರೆಗೆ 193‌‌ ವಾಹನ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಎರಡು ಲಕ್ಷಕ್ಕೂ ಅಧಿಕ ವಾಹನ ಸವಾರರು ನಿಯಮ ಮೀರಿದ್ದಾರೆ. ಐಟಿಎಮ್ಎಸ್ ಕ್ಯಾಮರಾದಿಂದ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. 9 ರೀತಿಯ ನಿಮಯಗಳು ಇದರಲ್ಲಿ ಡಿಟೆಕ್ಟ್ ಆಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

   ನೂರಕ್ಕಿಂತ ಹೆಚ್ಚು ವೇಗದಲ್ಲಿ ಹೋದರೆ ಐಟಿಎಮ್ಎಸ್ ಕ್ಯಾಮರಾ ಪತ್ತೆ ಮಾಡಿ ಮಾಹಿತಿ ಕಳುಹಿಸುತ್ತದೆ. ಅಂಥವರಿಗೆ ಫೈನ್ ಬೀಳಲಿದೆ. ಎಐ ಕ್ಯಾಮೆರಾ ಪೋಲ್ ಬಳಿ ಮಾತ್ರವಷ್ಟೇ ಅಲ್ಲ, ಕ್ಯಾಮೆರಾ ಇಲ್ಲದ ಜಾಗದಲ್ಲಿ ವೇಗವಾಗಿ ಹೋದರೂ ಗೊತ್ತಾಗುತ್ತದೆ. ಎರಡು ಕ್ಯಾಮರಾಗಳ ಮಧ್ಯೆ ಇಂತಿಷ್ಟೇ ವೇಗದ ಮಿತಿ ಹಾಗೂ ಸಮಯ ಫಿಕ್ಸ್ ಆಗಿರುತ್ತದೆ. ನೂರಕ್ಕಿಂತ ಹೆಚ್ಚು ವೇಗ ತೆರಳಿದರೆ, ಸಮಯಕ್ಕಿಂತ‌ ಮುಂಚೆ ಕ್ಯಾಮರಾ ಪೋಲ್ ಬಂದ್ರೆ ದಂಡ ವಿಧಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

   ಆರು ಸಾವಿರ ಜನರಿಗೆ ಈಗಾಗಲೇ ದಂಡದ ಸಂದೇಶ ಕಳುಹಿಸಲಾಗಿದೆ. ಉಳಿದ ವಾಹನಸವಾರರಿಗೂ ದಂಡ ಪಾವತಿಸುವಂಯೆ ನೊಟೀಸ್ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಪೊಲೀಸ್ ಇಲ್ಲ, ಕ್ಯಾಮರಾ ಇಲ್ಲ ಅಂತ ವೇಗವಾಗಿ ಹೋಗಬೇಡಿ. ಇಡೀ ಹೆದ್ದಾರಿಯಲ್ಲಿ ಐಟಿಎಮ್ಎಸ್ ಕ್ಯಾಮರಾ ನಿಗಾ ಇದೆ ಎಂದು ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap