ಸರ್ಕಾರದ ಕಾರ್ಯದರ್ಶಿ ವಿರುದ್ಧ ಕೈ ಶಾಸಕ ರಾಜುಕಾಗೆ ಆಕ್ರೋಶ

ಬೆಳಗಾವಿ:

   ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ವಿರುದ್ಧ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಕಾಗವಾಡ ಪಟ್ಟಣದಲ್ಲಿ ಸುಮಾರು 8.60 ಕೋಟಿ ರೂ. ವೆಚ್ಚದಲ್ಲಿ ಪ್ರಜಾ ಸೌಧ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡುವಂತೆ ರಾಜು ಕಾಗೆ ರಾಜೇಂದ್ರ ಕಠಾರಿಯಾ ಅವರ ಕಚೇರಿಗೆ ತೆರಳಿದ್ದರು. ಈ ವೇಳೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

   ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ರಾಜು ಕಾಗೆಯವರು, ಬೆಳಗಾವಿಯ ಕಾಗ್ವಾಡ್ ಪಟ್ಟಣದಲ್ಲಿ ಪ್ರಜಾಸೌಧ (ಸಾರ್ವಜನಿಕ ಆಡಳಿತ ಕಟ್ಟಡ) ನಿರ್ಮಾಣಕ್ಕೆ ಅನುಮೋದನೆ ಕೋರಿದಾಗ ನನಗೆ ಅವಮಾನ ಮಾಡಿದ್ದಾರೆಂದು ಹೇಳಿದ್ದಾರೆ.

   ಅಲ್ಲಿ ಕೆರೆ ಇತ್ತು, ನಿಮಗೆ ಬುದ್ಧಿ ಇದೆಯೋ ಇಲ್ಲವೋ ಹೋಗಿ ಅಂತ ಹೇಳಿ ನನಗೆ ಅಪಮಾನ ಮಾಡಿದ್ದಾರೆ. ನನಗೆ ಅಪಮಾನ ಮಾಡಿದ ಕಾರ್ಯದರ್ಶಿ ವಿರುದ್ಧ ನಾಳೆ ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಗುಡುಗಿದ್ದಾರೆ.ನಮ್ಮ ಸರ್ಕಾರದಲ್ಲಿ ಸಚಿವರಿಗೆ ಮತ್ತು ಕಾರ್ಯದರ್ಶಿಗೂ ತಾಳ ಮೇಳ ಇಲ್ಲ. ಇದೇ ರೀತಿ ಮುಂದುವರೆದರೆ ಶಾಸಕರು ಬೇರೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

   ಕಂದಾಯ ಇಲಾಖೆ ಕಾರ್ಯದರ್ಶಿ ಗ್ರಾಮ ಲೆಕ್ಕಿಗರು ಸೇರಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ, ಇದು ಆಡಳಿತಾತ್ಮಕ ಪ್ರಗತಿಗೆ ಮತ್ತಷ್ಟು ಅಡ್ಡಿಯಾಗುತ್ತಿದೆ ಎಂದು ಕಾಗೆ ಆರೋಪಿಸಿದರು.

Recent Articles

spot_img

Related Stories

Share via
Copy link