ರಾಜ್ಯದ ಮೇಲ್ಮನೆಯಲ್ಲಿ ವಿರೋಧ ಪಕ್ಷಕ್ಕೆ ನಾಯಕತ್ವದ ಕೊರತೆಯೇ ….?

ಬೆಂಗಳೂರು:

   ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಯು ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನನ್ನು (LoP) ಇನ್ನೂ ನೇಮಿಸಿಲ್ಲ. ಪಕ್ಷವು ಕೆಳಮನೆಯಲ್ಲಿ ಪ್ರತಿಪಕ್ಷದ ನಾಯಕನನ್ನು ನೇಮಿಸಿದೆ. ಎನ್‌ಡಿಎ ಬಹುಮತ ಹೊಂದಿದ್ದರೂ ಬಿಜೆಪಿ ಮೇಲ್ಮನೆಯಲ್ಲಿ ವಿಪಕ್ಷ ನಾಯಕನ್ನು ನೇಮಕ ಮಾಡಲು ಆಸಕ್ತಿ ತೋರತ್ತಿಲ್ಲ.

   ಪರಿಷತ್ ವಿಪಕ್ಷ ನಾಯನಾಗಿದ್ದ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರಿನಿಂದ ಸಂಸತ್ತಿಗೆ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿದೆ. ಮೇಲ್ಮನೆಯಲ್ಲಿ ಪ್ರಬಲ ನಾಯಕನ ಅಗತ್ಯವನ್ನು ಮನಗಂಡ ಬಿಜೆಪಿ, ಚಿಕ್ಕಮಗಳೂರಿನಿಂದ ಪರಾಭವಗೊಂಡಿದ್ದ ಮಾಜಿ ಶಾಸಕ ಸಿ.ಟಿ.ರವಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತು. ಆದರೆ ಇಲ್ಲಿಯವರೆಗೆ, ಪಕ್ಷವು ವಿಪಕ್ಷ ನಾಯಕನ ಸ್ಥಾನವನ್ನು ಅಧಿಕೃತಗೊಳಿಸಿಲ್ಲ.

   ವಿಧಾನಭೆ ಚುನಾವಣೆ ನಂತರ ಮೇ ನಿಂದ ನವೆಂಬರ್ ವರೆಗೆ ವಿಪಕ್ಷ ನಾಯಕ ಸ್ಥಾನವನ್ನು ಸುಮಾರು 7 ತಿಂಗಳುಗಳ ಕಾಲ ಖಾಲಿಯಿಟ್ಟಿತ್ತು.ನವೆಂಬರ್ ನಲ್ಲಿ ಒಕ್ಕಲಿಗ ನಾಯಕ ಆರ್. ಅಶೋಕ್ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿತು. ಪರಿಷತ್ ನಲ್ಲೂ ಕೂಡ ಇದೇ ವಿಧಾನವನ್ನು ಬಿಜೆಪ ಮುಂದುವರಿಸುವ ಸಾಧ್ಯತೆಯಿದೆ. ನಾಯಕನ ಕೊರತೆಯು ವಿರೋಧ ಪಕ್ಷಕ್ಕೆ ಅನಾನುಕೂಲವನ್ನು ಉಂಟುಮಾಡುತ್ತದೆ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ದುರ್ಬಲಗೊಳಿಸುತ್ತದೆ ಎಂದು ತಜ್ಞರು ವಾದಿಸುತ್ತಾರೆ. 

   ಮೇಲ್ಮನೆಯಲ್ಲಿ ಎನ್‌ಡಿಎ ಬಹುಮತ ಹೊಂದಿದೆ. ಕಾಂಗ್ರೆಸ್ 35 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ – 25 ಹಾಗ, ಮಿತ್ರ ಪಕ್ಷ ಜೆಡಿಎಸ್ 8 ಮತ್ತು ಸ್ವತಂತ್ರ ಸದಸ್ಯರನ್ನುಸೇರಿಸಿದರೆ ಒಟ್ಟು 38 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್‌ನಿಂದ ಬಿಜೆಪಿಗೆ ಬದಲಾದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೈತ್ರಿಯಿಂದ ಆಯ್ಕೆಯಾಗಿದ್ದಾರೆ.

   ಸದನ ಆರಂಭವಾಗಿ ಐದು ದಿನ ಕಳೆದರೂ ಮೇಲ್ಮನೆಯಲ್ಲಿ ಬಿಜೆಪಿ ಔಪಚಾರಿಕವಾಗಿ ನಾಯಕರ ನೇಮಕ ಮಾಡಿಲ್ಲ. ಇದರಲ್ಲಿ ಖಚಿತ ಷಡ್ಯಂತ್ರವಿದೆ ಎಂದು ಬಿಜೆಪಿ ಮೂಲಗಳು ಹೇಳಿದರೆ, ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಸಿ.ಟಿ ರವಿ ನಿರಾಕರಿಸಿದ್ದಾರೆ. ಈ ಹಿಂದೆ ಸಚಿವರಾಗಿದ್ದ ರವಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದು, 16 ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಸ್ಪರ್ಧಿಯಾಗಲಿದ್ದಾರೆ.

    ರವಿ ಅವರ ಜಾತಿ ಅವರ ವಿರುದ್ಧ ಹೋಗಬಹುದು ಎಂದು ಕೆಲವರು ಹೇಳುತ್ತಾರೆ. ಅವರು ಒಕ್ಕಲಿಗ, ಆದರೆ ವಿಧಾನಸಭೆಯ ವಿಪಕ್ಷ ನಾಯಕ ಅಶೋಕ ಕೂಡ ಒಕ್ಕಲಿಗ, ಮತ್ತು ಇದು ಇತರ ಸಮುದಾಯಗಳಿಂದ ಹುದ್ದೆಗೆ ಬೇಡಿಕೆಗೆ ಕಾರಣವಾಗಬಹುದು. ಇದಕ್ಕೆ ಪೂರಕವಾಗಿ ಮೇಲ್ಮನೆಯಲ್ಲಿ ಮಿತ್ರಪಕ್ಷ ಜೆಡಿಎಸ್ ಮುಖಂಡರಾದ ಚಿಕ್ಕಮಗಳೂರಿನ ಭೋಜೇಗೌಡರು ಕೂಡ ಒಕ್ಕಲಿಗರಾಗಿದ್ದಾರೆ. ಸಿ.ಟಿ ರವಿ ಈ ಐದು ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಅನಧಿಕೃತವಾಗಿ ಆರೋಪ ಹೊರಿಸಿ ಆಡಳಿತಾರೂಢ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದರೂ ಅವರ ಸೇವೆಗೆ ಮನ್ನಣೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap