ನವದೆಹಲಿ:
ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಬ್ರಿಗೇಡಿಯರ್(ಡಾ) ಬಿ.ಡಿ. ಮಿಶ್ರಾ(ನಿವೃತ್ತ) ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಅಂಗೀಕರಿಸಿದ್ದಾರೆ.ಇದೇ ವೇಳೆ ರಾಷ್ಟ್ರಪತಿಗಳು, ಲಡಾಖ್‌ಗೆ ಹೊಸ ಲೆಫ್ಟಿನೆಂಟ್ ಗವರ್ನರ್ ಹಾಗೂ ಹರಿಯಾಣ ಮತ್ತು ಗೋವಾ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಹರಿಯಾಣದ ನೂತನ ರಾಜ್ಯಪಾಲರಾಗಿ ಪ್ರೊ. ಆಶಿಮ್ ಕುಮಾರ್ ಘೋಷ್ ಅವರನ್ನು ಹಾಗೂ ಗೋವಾ ರಾಜ್ಯಪಾಲರಾಗಿ ಪುಸಪತಿ ಅಶೋಕ್ ಗಜಪತಿ ರಾಜು ನೇಮಕ ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ. ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಗಿ ಕವಿಂದರ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದ್ದು, ಈ ಮೂವರು ಅಧಿಕಾರ ವಹಿಸಿಕೊಳ್ಳುವ ದಿನಾಂಕಗಳಿಂದ ಅವರ ಅಧಿಕಾರ ಅವಧಿ ಜಾರಿಗೆ ಬರುತ್ತದೆ
