ಕೊರಟಗೆರೆ ;-
ರಾಜ್ಯ ಕನ್ನಡ ರಾಜ್ಯೋತ್ಸವ ಪುರಸ್ಕೃತ, ತಾಲೂಕು ಕುರುಬ ಸಂಘದ ಅಧ್ಯಕ್ಷ, ರಂಗಭೂಮಿ ಕಲಾವಿದ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದೆಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕಲಿಯುಗ ಆಂಜನೇಯನೆಂದೇ ಹೆಸರು ಪಡೆದೆ ಮೈಲಾರಪ್ಪ(81) ಕನ್ನಡ ರಾಜ್ಯೋತ್ಸವ ದಿನದಂದೆ ತಾಲೂಕಿನ ಕೆರೆಯಾಗಲಹಳ್ಳಿ ತಮ್ಮ ಸ್ವಗೃಹದಲ್ಲಿ ಮೃತರಾಗಿದ್ದಾರೆ.
ಕೊರಟಗೆರೆ ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿ ಸೇವೆ ಸಲಿಸುತ್ತಿದ್ದ ಹಾಗೂ ಕೊರಟಗೆರ ಪಟ್ಟಣದಲ್ಲಿ ಕಾಳಿದಾಸ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸದರಿ ವಿದ್ಯಾಸಂಸ್ಥೆಯಲ್ಲಿ 3೦ ವರ್ಷಗಳ ಕಾಲ ನೌಕರರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ತಮ್ಮ ಜೀವಿತಾವಧಿಯಲ್ಲಿ ಕೂರಟಗೆರೆ ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ರಂಗಭೂಮಿ ಕಲಾವಿದರಾಗಿ ಸಂಪೂರ್ಣರಾಮಾಯಣ ನಾಟಕದಲ್ಲಿ ಆಂಜನೇಯನಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿ ಕಲಿಯುಗ ಆಂಜನೇಯ ನೆಂದೇ ಹೆಸರು ಪಡೆದ ಮೈಲಾರಪ್ಪ ತಮ್ಮ ನೌಕರಿ ನಿವೃತಿಯ ನಂತರ ರಾಜಕೀಯ ಪ್ರವೇಶ ಮಾಡಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೈಲಾರಪ್ಪನವರಿಗೆ ರಾಜ್ಯ ಸರ್ಕಾರ ಉತ್ತಮ ಕಲಾವಿದರಾಗಿ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿತ್ತು, ಕಲಾವಿಧರಾಗಿದ್ದ ಶ್ರೀಯುತರು ಕನ್ನಡ ರಾಜ್ಯೋತ್ಸವ ದಿನದಂದೆ ಮೃತರಾಗಿದ್ದಾರೆ.
ತಾಲೂಕು ಕುರುಬ ಸಂಘದ ಅಧ್ಯಕ್ಷ, ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾರಪ್ಪ ನವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದ್ದು ಮೃತರ ಅತ್ಮಕ್ಕೆ ಶಾಂತಿ ದೊರೆಯಲ್ಲಿ ಹಾಗೂ ಅವರ ಕುಟುಂಭಕ್ಕೆ ಅವರ ಅಗಲಿಕೆಯ ನೋವು ದೇವರು ಸಹಿಸುವ ಶಕ್ತಿ ನೀಡಲಿ ಎಂದು ಗೃಹ ಸಚಿವ ಹಾಗೂ ಕ್ಷೇತ್ರದ ಶಾಸಕ ಡಾ.ಜಿ. ಪರಮೇಶ್ವರ್, ಪ್ರಜಾ ಪ್ರಗತಿ ಸಂಪಾದಕರಾದ ಎಸ್ ನಾಗಣ್ಣ, ಶ್ರೀದೇವಿ ಮೆಡಿಕಲ್ ಕಾಲೇಜಿನ ಸಂಸ್ಥಾಪಕರಾದ ಡಾ. ಹುಲಿ ನಾಯಕರ್, ಹರಿಕಥಾ ವಿದ್ವಾಂಸ್ ಲಕ್ಷ್ಮಣ್ ದಾಸ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೇಶಕ ಜಿ ಡಿ ನಾಗಭೂಷಣ್, ಕುರುಬ ಮುಖಂಡರಾದ ಲಾರಿ ಮಲ್ಲಣ್ಣ, ನಾರಾಯಣಪ್ಪ, ಈರಣ್ಣ, ರಂಗಣ್ಣ ಸೇರಿದಂತೆ ಹಲವರು ಮಮ್ಮಲ ಮರುಗಿದರೆ ಕಾಳಿದಾಸ ವಿದ್ಯಾಸಂಸ್ಥೆಯ ಆಡಳಿತ ಸಿಬ್ಬಂದಿ ಹಾಗೂ ನೌಕರರರು, ತಾಲೂಕಿನ ರಂಗಭೂಮಿ ಕಲಾವಿದರಾದ ಪುಟ್ಟಣ್ಣ, ಓಬಳರಾಜು, ಅತ್ಮೀಯ ಸ್ನೇಹಿತರಾದ ಹನುಮಂತರೆಡ್ಡಿ, ಪತ್ರಕರ್ತ ಎನ್.ಪದ್ಮನಾಭ್ ರಂಗಧಾಮಯ್ಯ, ಸೇರಿದಂತೆ ವಿವಿಧ ಸಂಘ ಸಂಸ್ಥೆಯಗಳ ಪಧಾದಿಕಾರಿಳು ಸಂತಾಪ ವ್ಯಕ್ತಪಡಿಸಿದ್ದಾರೆ,








