ಬೆಂಗಳೂರು :
ಝೀ ಕನ್ನಡದಲ್ಲಿ ಭರ್ಜರಿ ಆಗಿ ಸಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿರುವ ಈ ಶೋ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಪ್ರತಿ ವಾರ ಈ ಶೋ ಒಂದಲ್ಲ ಒಂದು ದೊಡ್ಡ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ನಿನ್ನೆ ಈ ಶೋ ತುಂಬಾನೆ ಸ್ಪೆಷಲ್ ಆಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬವನ್ನು ಶೋನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಶೋನಲ್ಲಿ ಬುಲೆಟ್ ಪ್ರಕಾಶ್ ಮಗ ಹಾಗೂ ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಕೂಡ ಮಿಂಚುತ್ತಿದ್ದಾರೆ. ರಕ್ಷಕ್ ಬುಲೆಟ್ಗೆ ಕನ್ನಡತಿ ಸೀರಿಯಲ್ ಖ್ಯಾತಿಯ ರಮೋಲ ಅವರು ಜೋಡಿಯಾಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್ನಲ್ಲಿ ವಿಶೇಷ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ರಮೋಲ ರಕ್ಷಕ್ ಅವರ ಮನೆಗೆ ಹೋಗಿದ್ದರು. ಅಲ್ಲಿ ಅಡುಗೆ ಮಾಡಿದ್ದರು. ರಕ್ಷಕ್ ಅಮ್ಮನ ಜೊತೆ ತುಂಬಾ ಕ್ಲೋಸ್ ಆಗಿ ಮಿಂಗಲ್ ಆಗಿದ್ದರು.
ಬಳಿಕ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರಕ್ಷಕ್ ಬುಲೆಟ್ ತಾಯಿ ಬಂದಿದ್ದಾರೆ. ವೇದಿಕೆಗೆ ಎಂಟ್ರಿ ಕೊಟ್ಟ ಅವರು, ಮಗನ ಬಗ್ಗೆ ಒಂದಿಷ್ಟು ಮಾತಾಡಿದ್ದಾರೆ. ಆ ಬಳಿಕ ನಿರೂಪಕ ನಿರಂಜನ್ ದೇಶಪಾಂಡೆ ನಿಮ್ಮ ಸೊಸೆ ಆಗಿ ಬರುವವರು ಹೇಗೆ ಇರಬೇಕು? ಎಂದು ಕೇಳಿದ್ದಾರೆ. ಆಗ ರಕ್ಷಕ್ ತಾಯಿ, ‘ನಾನು ಇಷ್ಟು ದಿನ ಹುಡುಗಿ ಹುಡುಕಬೇಕು ಅಂತ ಅಂದುಕೊಂಡಿದ್ದೆ. ಆದರೆ ಈಗ ಹುಡುಕೋದು ಇಲ್ಲ. ಏಕೆಂದರೆ ರಮೋಲಾ ಓಕೆ ಅಂದ್ರೆ ಸಾಕು’ ಅಂತ ಹೇಳಿದ್ದಾರೆ. ಇದಕ್ಕೆ ರಕ್ಷಕ್ ಒಕೆ ಅಂತ ಹೇಳು ಎಂದಿದ್ದಾರೆ.
ಈ ಮಾತನ್ನು ಹೇಳುತ್ತಿದ್ದಂತೆ ರಕ್ಷಕ್ ಅಮ್ಮನ ಕಾಲಿಗೆ ಬಿದ್ದು ಬಿಟ್ಟಿದ್ದಾರೆ. ಬಳಿಕ ಮಾತನಾಡಿದ ರಮೋಲ, ರಕ್ಷಕ್ ನಂಗೆ ಯಾವಾಗ್ಲೂ ಹೆದರಿಸುತ್ತ ಇರುತ್ತಾನೆ.. ಹೇಳು ನಮ್ಮ ಅಮ್ಮಂಗೆ, ನೀನೆ ಮದುವೆ ಆಗ್ತೀಯ ಅಂತ ಹೇಳು.. ನಮ್ಮ ಅಮ್ಮನ ಹತ್ರ ಹೋಗಿ ಹೇಳು ಎಂದು ಹೆದರಿಸ್ತಾ ಇರ್ತಾನೆ ಎಂದು ಹೇಳಿದ್ದಾರೆ.








