ಬೆಂಗಳೂರು:
ಕಾಂತಾರ ಪ್ರೀಕ್ವೆಲ್ ಕಥೆ ಹೊತ್ತು ಮತ್ತೆ ದೇಶ ಪರ್ಯಟನೆ ಮಾಡಲು ಸಜ್ಜಾಗಿರೋದು ನಿಮಗೆ ಗೊತ್ತೇ ಇದೆ. ಈ ಬಾರಿ ಮೊದಲ ಚಿತ್ರದಂತೆ 16 ಕೋಟಿ ರೂಪಾಯಿಯ ಬಜೆಟ್ನಲ್ಲಿ ಸಿನಿಮಾ ಮಾಡುತ್ತಿಲ್ಲ. ಬರೋಬ್ಬರಿ 120 ಕೋಟಿ ರೂ. ಬಂಡವಾಳ ಹಾಕಿ ಅದ್ಧೂರಿ ಮೇಕಿಂಗ್ ಮತ್ತು ದೊಡ್ಡ ಮಟ್ಟದ ತಾರಾಗಣದ ಜೊತೆ ಬರುತ್ತಿದ್ದಾರೆ ಡಿವೈನ್ ಸ್ಟಾರ್.
ಇಷ್ಟಿದ್ಮೇಲೆ ಸಿನಿಮಾದ ತಾಂತ್ರಿಕ ವರ್ಗ ಕೂಡ ಅಷ್ಟೇ ಸ್ಟ್ರಾಂಗ್ ಇರಬೇಕಲ್ವಾ?. ಹಾಗಿದ್ದಾಗ ಮಾತ್ರ ಸಿನಿಮಾ ಅತ್ಯದ್ಭುತ ಅನುಭವ ನೀಡಲಿದೆ. ಹಾಗಾಗಿ ರಿಷಬ್ ಅದ್ಧೂರಿ ತಾರಾಗಣದ ಜೊತೆ ಪ್ರತಿಭಾನ್ವಿತರ ತಾಂತ್ರಿಕ ತಂಡವನ್ನು ಕಟ್ಟಿದ್ದಾರೆ.
‘ಕಾಂತಾರ’ ಮೊದಲ ಭಾಗ ದೈವಿಕ ಅಂಶಗಳ ಜೊತೆಗೆ ಜಾತಿ ಪದ್ಧತಿ, ಪರಿಸರ ಕಾಳಜಿ, ಕಂಬಳ ಮತ್ತು ಅದ್ಧೂರಿ ಆ್ಯಕ್ಷನ್ ದೃಶ್ಯಗಳನ್ನು ಒಳಗೊಂಡಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದವ್ರು ರಿಷಬ್ ಶೆಟ್ಟಿ ಹೀಗೂ ಆ್ಯಕ್ಷನ್ ಮಾಡುತ್ತಾರಾ? ಅಂತಾ ಸಿನಿಪ್ರಿಯರು ಹುಬ್ಬೇರಿಸಿದ್ರು. ಅಷ್ಟೇ ಅಲ್ಲ, ರಿಷಬ್ ಶೆಟ್ಟಿಯ ಫೈಟ್ ನೋಡಿ ಫುಲ್ ಮಾರ್ಕ್ಸ್ ಕೂಡ ಕೊಟ್ಟಿದ್ರು. ಇದೀಗ ಪ್ರೀಕ್ವೆಲ್ ಕಥೆ ಹೇಳೋಕೆ ಹೊರಟಿದ್ದಾರೆ ರಿಷಬ್ ಶೆಟ್ಟಿ
ಇದು ಬನವಾಸಿಯ ಕದಂಬರ ಕಾಲಘಟ್ಟದ ದೈವಾರಾಧನೆಯ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಆ ಕಾಲಘಟದ್ದ ಆ್ಯಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿರಲಿವೆ. ಅದಕ್ಕಾಗಿ ಈಗ ಕಾಂತಾರದ ದಟ್ಟ ಕಾಡಿನೊಳಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ಸ್ಟಂಟ್ ಮಾಸ್ಟರ್ಗಳಾದ ರಾಮ್ ಲಕ್ಷ್ಮಣ್ ಎಂಟ್ರಿ ಕೊಟ್ಟಿದ್ದಾರಂತೆ
ರಾಮ್ ಲಕ್ಷ್ಮಣ್ ಕನ್ನಡಕ್ಕೆ ಹೊಸಬರೇನಲ್ಲ. ಪುನೀತ್ ರಾಜ್ಕುಮಾರ್ ಅವರ ಹಲವು ಸಿನಿಮಾಗಳಿಗೆ ಸ್ಟಂಟ್ ಡೈರೆಕ್ಷನ್ ಮಾಡಿದ್ದಾರೆ. ಮಾಸ್ ಹೀರೋ ಧ್ರುವ ಸರ್ಜಾರ ಎಲ್ಲಾ ಸಿನಿಮಾವದಲ್ಲೂ ರಾಮ್ ಲಕ್ಷ್ಮಣ್ ಕೈ ಚಳಕ ಇರುತ್ತದೆ. ದರ್ಶನ್ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಯಶ್ ಸೇರಿದಂತೆ ಬಹುತೇಕ ಕನ್ನಡದ ಬಿಗ್ ಸ್ಟಾರ್ಗಳಿಗೆ ಫೈಟ್ ಕಂಪೋಸ್ ಮಾಡಿರೋ ಕೀರ್ತಿ ಈ ಅಣ್ತಮ್ಮಂದಿರದ್ದು. ಸದ್ಯ ಕಾಂತಾರದ ಪ್ರೀಕ್ವೆಲ್ ಸ್ಟೋರಿಯಲ್ಲಿ ರಿಷಬ್ ಶೆಟ್ಟಿ ಜೊತೆ ಕೆಲಸಕ್ಕೆ ಇಳಿದಿದ್ದಾರೆ. 12 ದಿನಗಳ ಕಾಲ ಆ್ಯಕ್ಷನ್ ದೃಶ್ಯದ ಚತ್ರೀಕರಣ ನಡೆಯಲಿದೆ. ಅದಕ್ಕಾಗಿ ಕುಂದಾಪುರುದ ಕೆರಾಡಿಯಲ್ಲಿ ಅಖಾಡ ರೆಡಿಯಾಗ್ತಿದೆ.