ದೀಪ ಜ್ಞಾನದ ಸಂಕೇತ: ಶ್ರೀ ರಂಭಾಪುರಿ ಜಗದ್ಗುರುಗಳು

ಹುಬ್ಬಳ್ಳಿ, :

       ಹೊರಗಿನ ಕತ್ತಲೆ ಕಳೆಯಲು ದೀಪಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆಂದು ಬಾಳೆಹೊನ್ನುರು ಶ್ರೀ ರಂಭಾಪುರಿ ಡಾ‌. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

     ಅವರು ಹುಬ್ಬಳ್ಳಿ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿರುವ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಜರುಗಿದ ಕಾರ್ತೀಕ ದೀಪೋತ್ಸವ ಸಮಾರಂಭದ ಸಾನಿಧ್ಯವಹಿಸಿ, ಆಶಿರ್ವಚನ ನೀಡಿದರು.

    ಮನುಷ್ಯನಿಗೆ ಅರಿವು, ಆರೋಗ್ಯ ಮತ್ತು ಆಯುಷ್ಯ ಬಹು ಮುಖ್ಯ. ಭೌತಿಕ ಬದುಕು ಸಂಪತ್ತಿನಷ್ಟೆ ಉಜ್ವಲಗೊಳ್ಳುವುದು. ಸಂಪತ್ತಿನ ಜೊತೆ ಶಿವ ಜ್ಞಾನದ ಅರಿವು ಸಂಪಾದಿಸಿಕೊಂಡು ಬಾಳ ಬೇಕಾಗುತ್ತದೆ ಎಂದು ಅವರು ಹೇಳಿದರು.

   ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯ ಆಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ.

    ಅಹಿಂಸಾ, ಸತ್ಯ,ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ, ಜಪ, ಧ್ಯಾನ ಎಂಬ ಹತ್ತು ಸೂತ್ರಗಳು ಸಕಲರ ಬಾಳಿನ ಶ್ರೇಯಸ್ಸಿಗೆ ಕಾರಣವಾಗಿವೆ.ಮಾತು ಮತ್ತು ಕೃತಿ ಒಂದಾಗಿ ಬಾಳಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. 

      ಶ್ರೀ ಜಗದ್ಗುರು ರಂಭಾಪುರೀಶ ಸಾಸಂಸ್ಕೃತಿಕ ಸಂಘದ ಅಧ್ಯಕ್ಷರಾದ ವಿಶ್ವನಾಥ ಹಿರೇಗೌಡರ ಅವರು ಮತ್ತು ಅವರ ಸಂಗಡಿಗರು ಮಾಡುತ್ತಿರುವ ಕಾರ್ಯ ಸ್ತುತ್ಯವಾದದ್ದು ಎಂದರು.

    ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾದ ವೀಣಾ ಭರದ್ವಾಡ ಅವರು ಸಮಾರಂಭ ಉದ್ಘಾಟಿಸಿದರು.

    ಪವಿತ್ರ ಸಮಾರಂಭದಲ್ಲಿ ಸುಳ್ಳ ಪಂಚಗ್ರಹ ಹಿರೇಮಠದ ಷ.ಬ್ರ. ಶಿವ ಸಿದ್ದರಾಮೇಶ್ವರ ಶಿವಾಚಾರ್ಯರು, ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಷ.ಬ್ರ.ಅಭಿನವ ಶಾಂತಲಿಂಗ ಶಿವಾಚಾರ್ಯರು ಮತ್ತು ಚಿಮ್ಮಲಗಿ ಹಿರೇಮಠದ ಷ.ಬ್ರ. ಸಿದ್ದರೇಣುಕ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಸಮಾರಂಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಾಲಾಜಿ ಕೃಷ್ಣ ಹಾಗೂ ದ್ವೀತಿಯ ಸ್ಥಾನ ಪಡೆದ ಸಹನಾ ಪತ್ತಾರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮತ್ತು ಜೀ ಕನ್ನಡ ಕಲಾವಿದ ಹಣಮಂತ ಲಮಾಣಿ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳಾದ ಡಾ.ಎನ್.ಆರ್. ಬಾಣಾಪುರಮಠ, ಅಂತರಾಷ್ಟ್ರೀಯ ಕುಬ್ಜರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ದೇವಪ್ಪ ಮೋರೆ ಅವರಿಗೆ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.

ಶ್ರೀ ಜಗದ್ಗುರು ರಂಭಾಪುರಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು.

ಸಮಾರಂಭದಲ್ಲಿ ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ನಿಂಗನಗೌಡ ಮರಿಗೌಡ್ರ, ಯುವ ಧುರೀಣ ಸದಾನಂದ ಡಂಗನವರ, ಸಿವಿಲ್ ಗುತ್ತಿಗೆದಾರ ಬಸವರಾಜ ಕಲ್ಯಾಣಿಮಠ, ಮಹಾನಗರ ಪಾಲಿಕೆ ನಿವೃತ ಕಾರ್ಯನಿರ್ವಾಹಕ ಅಭಿಯಂತರ ಶಿವರುದ್ರಪ್ಪ ಮನ್ನಂಗಿ ಅವರಿಗೆ ಜಗದ್ಗುರು ಮಹಾಸನ್ನಿಧಿಯವರು ಗುರುರಕ್ಷೆ ನೀಡಿ, ಆಶಿರ್ವದಿಸಿದರು.

ಶ್ರೀ ಮದ್ವೀರಶೈವ ಸಧ್ಭೋದನಾ ಸಂಸ್ಥೆಯ ಹುಬ್ಬಳ್ಳಿ ತಾಲೂಕು ಘಟಕ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ, ಡಾ.ಎನ್.ಎ.ಚರಂತಿಮಠ ಹಾಗೂ ಇತರರು ಸಮಾರಂಭದ ವೇದಿಕೆಯಲ್ಲಿ ಇದ್ದರು.

ಬಸವರಾಜ ಕುಂದಗೋಳಮಠ ಸೇರಿದಂತೆ ಅವಳಿನಗರದ ಗಣ್ಯರು, ಪಾರ್ವತಿ ಮಹಿಳಾ ಮಂಡಳದ ಸದಸ್ಯರು, ರಂಭಾಪುರಿ ಪೀಠದ ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಾಹಿತಿ, ಸಂಘಟಕ ಗದಗಯ್ಯ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Recent Articles

spot_img

Related Stories

Share via
Copy link
Powered by Social Snap