ಟಿಟಿಇ ಮೇಲೆ ಬಿಸಿ ಚಹಾ ಸುರಿದು ಮಹಿಳೆಯ ರಂಪಾಟ…….!

ನವದೆಹಲಿ: 

    ಭಾರತೀಯ ರೈಲ್ವೆಯಲ್ಲಿ  ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಾನೂನುಬಾಹಿರ. ಆದರೆ, ಅದೆಷ್ಟೋ ಮಂದಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಾರೆ. ದಂಡ ಅಥವಾ ಜೈಲು ಶಿಕ್ಷೆಯಂತಹ ನಿಯಮಗಳಿದ್ದರೂ, ಟಿಕೆಟ್ ಇಲ್ಲದೆ ಪ್ರಯಾಣಿಸುವಾಗ ಹಲವು ಪ್ರಯಾಣಿಕರು ಸಿಕ್ಕಿಬೀಳುತ್ತಾರೆ. ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದ ವೇಳೆ ಶಿಕ್ಷಕಿಯೊಬ್ಬರು ಸಿಕ್ಕಿಬಿದ್ದ ಘಟನೆಯ ದೃಶ್ಯಾವಳಿ ವೈರಲ್ ಆದ ಕೆಲವು ದಿನಗಳ ನಂತರ, ಇದೀಗ ಡೂನ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳೆಯೊಬ್ಬರ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿದೆ.

   ವಿಡಿಯೊದಲ್ಲಿ, ಮಹಿಳೆ ಮತ್ತು ರೈಲು ಟಿಕೆಟ್ ಪರೀಕ್ಷಕ (ಟಿಟಿಇ) ನಡುವಿನ ವಾಗ್ವಾದವನ್ನು ಸೆರೆಹಿಡಿದೆದೆ. ಇದು ರೈಲುಗಳಲ್ಲಿನ ಹೊಣೆಗಾರಿಕೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ವಿಡಿಯೊದಲ್ಲಿ, ಮಹಿಳೆ ಮತ್ತು ಟಿಟಿಇ ನಡುವೆ ವಾಗ್ವಾದ ನಡೆಯುತ್ತಿರುವುದು ಕಂಡುಬರುತ್ತದೆ. ಆ ವ್ಯಕ್ತಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರೆ, ಗಲಾಟೆಯ ಸಮಯದಲ್ಲಿ ಆಕೆ ತನಗೆ ಬಿಸಿ ಚಹಾ ಸುರಿದು ಹಲ್ಲೆ ನಡೆಸಿದ್ದಾಳೆ ಎಂದು ಟಿಟಿಇ ಆರೋಪಿಸಿದ್ದಾರೆ. ವಾಗ್ವಾದ ಮುಂದುವರೆದಂತೆ ಇಬ್ಬರೂ ಧ್ವನಿ ಏರಿಸಿದ್ದಾರೆ.

   ನೀವು ಏನೇನು ಬೈದಿದ್ದೀರಿ ಎಂಬುದು ನನಗೆ ತಿಳಿದಿದೆ ಎಂದು ಹೇಳುತ್ತಾ ಟಿಟಿಇ, ಇತರ ಪ್ರಯಾಣಿಕರ ಕಡೆಗೆ ನೋಡಿದರು. ಈ ವೇಳೆ ಮಹಿಳೆಯು ನೀವು ನನಗೆ ಹೊಡೆದಿದ್ದೀರಿ ಎಂದು ಆರೋಪಿಸಿದ್ದಾಳೆ. ಈಕೆ ತನ್ನ ಮೇಲೆ ಬಿಸಿ ಚಹಾ ಸುರಿದಿದ್ದಾಳೆ ಎಂದು ಟಿಟಿಇ ಆರೋಪಿಸಿದ್ದಾರೆ. ಅಲ್ಲಿದ್ದ ಪ್ರಯಾಣಿಕರು ಟಿಟಿಇ ಮಾತನ್ನು ಒಪ್ಪಿಕೊಂಡರು.

   ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಲಕ್ಷಾಂತರ ಜನರಲ್ಲಿ ಕೇವಲ 2-3 ಒಳ್ಳೆಯ ಟಿಟಿಇ ಇದ್ದಾರೆ. ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಬಗ್ಗೆ ಯಾವುದೇ ಸಹಾನುಭೂತಿ ತೋರಬಾರದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಮಗದೊಬ್ಬ ಬಳಕೆದಾರರು ಹೇಳಿದರು. 

   ಕೆಲವು ದಿನಗಳ ಹಿಂದೆ, ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವ ವಿಡಿಯೊ ವೈರಲ್ ಆಗಿತ್ತು. ಟಿಟಿಇ ಅವರನ್ನು ಪ್ರಶ್ನಿಸಿದಾಗ, ಮಹಿಳೆಯು ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ವಲ್ಪ ಸಮಯದ ನಂತರ, ಅವರು ತಮ್ಮ ಆಸನವನ್ನು ತೊರೆದರು. ಆದರೆ ನಂತರ ನಿಲ್ದಾಣದಲ್ಲಿ ಟಿಟಿಇ ಜೊತೆ ವಾದಿಸುತ್ತಿರುವುದು ಕಂಡುಬಂದಿತು.

   ಘಟನೆಯ ವಿಡಿಯೊ ವೈರಲ್ ಆದ ನಂತರ ಭಾರತೀಯ ರೈಲ್ವೆ ಟಿಕೆಟ್ ಪರಿಶೀಲನಾ ಸಿಬ್ಬಂದಿ ಸಂಸ್ಥೆ (IRTCSO) ಕಳವಳ ವ್ಯಕ್ತಪಡಿಸಿತು. ಆರ್‌ಪಿಎಫ್ ಮುಂದೆ ರೈಲ್ವೆ ಉದ್ಯೋಗಿಯೊಬ್ಬರಿಗೆ ಹೇಗೆ ಜೀವ ಬೆದರಿಕೆ ಹಾಕಲಾಯಿತು ಎಂದು ಅವರು ಪ್ರಶ್ನಿಸಿದರು ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಯೋರಿಯಾದಲ್ಲಿರುವ ನಿಲ್ದಾಣದ ಉಸ್ತುವಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಿದ್ದೇವೆ ಎಂದು ಆರ್‌ಪಿಎಫ್ ಟ್ವೀಟ್ ಮಾಡಿದೆ. ನಂತರ, ಆ ಮಹಿಳೆ ಬಿಹಾರದವರಲ್ಲ, ಉತ್ತರ ಪ್ರದೇಶದ ಡಿಯೋರಿಯಾದವರೆಂದು ತಿಳಿದುಬಂದಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಅವರಿಗೆ 990 ರೂ. ದಂಡ ವಿಧಿಸಲಾಗಿದೆ.

Recent Articles

spot_img

Related Stories

Share via
Copy link