ಮುಂಬೈ:
ಬಾಲಿವುಡ್‌ನಲ್ಲಿ ಮೂಡಿ ಬರುತ್ತಿರುವ ರಾಮಾಯಣ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಚಿತ್ರದ ಶೂಟಿಂಗ್ ಫೋಟೋಗಳು ಬಹಳಷ್ಟು ವೈರಲ್ ಆಗಿವೆ. ಇದರಲ್ಲಿ ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸಲಿದ್ದಾರೆ. ಇದೀಗ ರಾಮನ ಪಾತ್ರದಲ್ಲಿ ನಟಿಸುವಂತಹ ರಣಬೀರ್ ಕಪೂರ್ ಬಗ್ಗೆ ಬಾಲಿವುಡ್ ಹಿರಿಯ ನಟ ಮುಕೇಶ್ ಖನ್ನಾ ಗರಂ ಆಗಿದ್ದು, ಆ ಪಾತ್ರಕ್ಕೆ ರಣಬೀರ್ ಕಪೂರ್ ಸರಿಹೊಂದುವುದಿಲ್ಲ ಎನ್ನುವಂತೆ ಹೇಳಿಕೆ ನೀಡಿದ್ದಾರೆ.
ಸಂದರ್ಶನ ಒಂದರಲ್ಲಿ ರಾಮಾಯಣ ಸಿನಿಮಾ ಬಗ್ಗೆ ಮಾತನಾಡಿದ ಮುಕೇಶ್, ರಾಮನ ಪಾತ್ರದಲ್ಲಿ ನಟಿಸುವ ರಾಮನಂತಿರಬೇಕೇ ಹೊರತು ರಾವಣನ ಹಾಗಲ್ಲ ಎಂದು ಮುಕೇಶ್ ಖನ್ನಾ ಹೇಳಿಕೆ ನೀಡಿದ್ದಾರೆ. ಆಯಾ ಪಾತ್ರಕ್ಕೆ ಒಂದು ಅರ್ಥ ಇರಬೇಕು. ರಾಮನ ಪಾತ್ರವನ್ನು ಮಾಡುತ್ತಿದ್ದರೆ ಆ ಪಾತ್ರ ಆ ವ್ಯಕ್ತಿಗೆ ಹಿಡಿಸಬೇಕು ಎಂದಿದ್ದಾರೆ. ಅನಿಮಲ್ ಚಿತ್ರದ ಬಗ್ಗೆ ಮಾತಾಡಿದ ಮುಕೇಶ್,ಅನಿಮಲ್ ಚಿತ್ರದಲ್ಲಿ ರಣಬೀರ್ ಗೆ ನೆಗೆಟಿವ್ ರೊಲ್ ಇತ್ತು. ಈ ಪಾತ್ರವು ಪ್ರೇಕ್ಷಕರ ಮನಸ್ಸಿನಲ್ಲಿ ಭಗವಾನ್ ರಾಮನ ಸಿನಿಮಾ ಮೇಲೆ ನೆಗೆಟಿವ್ ಇಮೇಜ್ ಬೀರಬಹುದು ಎಂದಿದ್ದಾರೆ.
ನಟ ಪ್ರಭಾಸ್ ಕೂಡ ರಾಮ ಪಾತ್ರವನ್ನು ಮಾಡಿದ್ದರು. ರಾಮಾಯಣ ಕಾವ್ಯವನ್ನೇ ಆಧರಿಸಿ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಮೂಡಿ ಬಂದಿತ್ತು. ಆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು.ಆದ್ರೆ ಜನಕ್ಕೆ ಅದು ಅಷ್ಟು ಹಿಡಿಸಿಲ್ಲ. ಇದಕ್ಕೆ ಕಾರಣ ಅವರ ಪಾತ್ರ ಚೆನ್ನಾಗಿಲ್ಲ ಅಂತ ಅಲ್ಲ, ಆದ್ರೆ ಅವರು ರಾಮನಂತೆ ಕಾಣುತ್ತಿಲ್ಲ ಅನ್ನೋದೆ ಕಾರಣ ಎಂದಿದ್ದಾರೆ.
ರಾಮಾಯಣ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದು, ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಸಾಯಿಪಲ್ಲವಿ ಸೀತೆಯ ಪಾತ್ರ ಮಾಡಲಿದ್ದಾರೆ. ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿ ಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಹಾಗೇ ಬಾಲಿವುಡ್ ನಟಿ ಲಾರಾ ದತ್ತಾ ಕೈಕೇಯಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ರಾಮಾಯಣ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಯಾಗಲಿದೆ ಎನ್ನುವ ಮಾಹಿತಿಯು ಹರಿದಾಡುತ್ತಿದೆ.