ರಂಜಿತಾ ಕೊಲೆ ಪ್ರಕರಣ : ಆರೋಪಿ ರಫೀಕ್ ಆತ್ಮಹತ್ಯೆ.

ಯಲ್ಲಾಪುರ:

    ರಾಮಾಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ರಂಜಿತಾ (30) ಎಂಬ ಮಹಿಳೆಯೋರ್ವರವನ್ನು ರಫೀಕ್ ಎನ್ನುವ ವ್ಯಕ್ತಿ ನಿರ್ದಯವಾಗಿ ಹತ್ಯೆಗೈದಿದ್ದ.ಈ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನಾದ್ಯಂತ ವ್ಯಾಪಕ ಜನಾಕ್ರೋಶ ಉಂಟಾಗಿತ್ತು.ರಂಜಿತಾ ಕೊಲೆ ಖಂಡಿಸಿ ಭಾನುವಾರ ಯಲ್ಲಾಪುರ ಬಂದ್ ಗೆ ಕರೆ ನೀಡಲಾಗಿತ್ತು.

    ಸದ್ಯ ರಂಜಿತಾ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಆರೋಪಿ ರಫೀಕ್ ಯಲ್ಲಾಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ ಬಂಧನ ಭೀತಿ ಅಥವಾ ದುಷ್ಕೃತ್ಯದ ಪಾಪ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಅಂತಿಮವಾಗಿ ಪೊಲೀಸ್ ಇಲಾಖೆಯ ಸ್ಪಷ್ಟೀಕರಣ ದೊಂದಿಗೆ ನಿಖರ ಮಾಹಿತಿ ತಿಳಿಯಲಿದೆ.

Recent Articles

spot_img

Related Stories

Share via
Copy link