ಬೆಂಗಳೂರು
ಚಿನ್ನ ಕಳ್ಳಸಾಗಾಣಿಕೆ ಆರೋಪದಲ್ಲಿ ನಟಿ ರನ್ಯಾ ರಾವ್ ರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ನಟಿ ರನ್ಯಾ ರಾವ್ಗೆ ಚಿನ್ನ ನೀಡಿದ ವ್ಯಕ್ತಿ ಯಾರು ಮತ್ತು ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ತಂದಿದ್ದು ಹೇಗೆ ಎಂಬುವುದನ್ನು ಡಿಆರ್ಐ ಅಧಿಕಾರಿಗಳು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. ನಟಿ ರನ್ಯಾ ರಾವ್ ಸ್ವಿಟ್ಜರ್ಲೆಂಡ್‌ನ ಜಿನೆವಾಕ್ಕೆ ಹೋಗುವುದಾಗಿ ಹೇಳಿ ದುಬೈದಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನವನ್ನು ತಂದಿದ್ದಾರೆ ಎಂಬ ಸಂಗತಿ ಡಿಆರ್ಐ ತನಿಖೆ ವೇಳೆ ಬೆಳಕಿಗೆ ಬಂದಿದೆ.
2024ರ ಡಿಸೆಂಬರ್ 13 ಹಾಗೂ 20 ರಂದು ಪ್ರತ್ಯೇಕವಾಗಿ ಎರಡು ಬಾರಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ರನ್ಯಾ ರಾವ್ ಖರೀದಿಸಿದ್ದರು. ಬಳಿಕ, ಚಿನ್ನವನ್ನು ಸಾಗಿಸುವಾಗ ಅಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಾವು ಸ್ವಿಜರ್ಲೆಂಡ್ನ ಜಿನೆವಾಕ್ಕೆ ಹೋಗುವುದಾಗಿ ಸುಳ್ಳು ಹೇಳಿ ಬೆಂಗಳೂರಿಗೆ ಬಂದಿದ್ದರು. ಈ ರೀತಿಯಾಗಿ ನಟಿ ರನ್ಯಾ ರಾವ್ ದುಬೈ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳ ಕಣ್ತಪ್ಪಿಸಿದ್ದಾರೆ ಎಂದು ಡಿಆರ್ಐ ಹೇಳಿದೆ ಎಂದು ವರದಿಯಾಗಿದೆ.
ತನಗೆ ಚಿನ್ನ ನೀಡಿದ ವ್ಯಕ್ತಿ “ಆರು ಅಡಿಗೂ ಹೆಚ್ಚು ಎತ್ತರವಿದ್ದ, ಉತ್ತಮ ಮೈಕಟ್ಟು ಹೊಂದಿದ್ದ, ಆಫ್ರಿಕನ್-ಅಮೇರಿಕನ್ ಉಚ್ಚಾರಣೆ ಮತ್ತು ಗೋಧಿ ಮೈ ಬಣ್ಣವಿತ್ತು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರ ಗೇಟ್ ‘ಎ’ ನಲ್ಲಿರುವ ಊಟದ ಕೋಣೆಯ ಎಸ್ಪ್ರೆಸೊ ಯಂತ್ರದ ಬಳಿ ಆ ವ್ಯಕ್ತಿಯನ್ನು ಭೇಟಿಯಾದೆ. ಈ ಭೇಟಿಗೂ ಮೊದಲು ಅತ ಇಂಟರ್ನೆಟ್ ಕರೆ ಮಾಡಿ, ಎಲ್ಲಿ ಭೇಟಿಯಾಗಬೇಕು ಎಂಬುವುದನ್ನು ತಿಳಿಸಿದ್ದನು. ಅಲ್ಲದೇ, ಗುರುತಿಗಾಗಿ ತಾನು ಬಿಳಿ ಕಂದುರಾ (ಸಾಂಪ್ರದಾಯಿಕ ಅರಬ್ ನಿಲುವಂಗಿ) ಧರಿಸಿವುದಾಗಿ ಹೇಳಿದ್ದನು ಎಂದು ಎಂದು ಡಿಆರ್ಐ ಅಧಿಕಾರಿಗಳ ಮುಂದೆ ನಟಿ ರನ್ಯಾ ರಾವ್ ಹೇಳಿದ್ದಾರೆ.
