ಗೋವಾ
ಪಾರ್ಟಿಗೆಂದು ಮೂವರು ಬಾಲಕಿಯರನ್ನು ಆಹ್ವಾನಿಸಿ ಸ್ನೇಹಿತರೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಜೂನ್ 8 ರಂದು ಈ ಘಟನೆ ನಡೆದಿದ್ದು, ಹುಡುಗಿಯರ ಪೋಷಕರು ಪೊಲೀಸರ ಬಳಿ ನಾಪತ್ತೆ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಬಾಲಕಿಯರು 11, 13 ಮತ್ತು 15 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಅವರಲ್ಲಿ ಇಬ್ಬರು ಒಡಹುಟ್ಟಿದವರು. ಪೊಲೀಸರ ಪ್ರಕಾರ, ಹುಡುಗಿಯರು ಆರೋಪಿಗಳ ಸ್ನೇಹಿತರಾಗಿದ್ದರು ಮತ್ತು ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದರಿಂದ ಇವರು ಹೋಗಿದ್ದರು.
ಪೊಲೀಸರು ಅವರನ್ನು ಹುಡುಕಲು ಹಲವಾರು ತಂಡಗಳನ್ನು ರಚಿಸಿದ ನಂತರ ಅದೇ ದಿನ ಕ್ಯಾಲಂಗುಟ್ ಬೀಚ್‌ನಲ್ಲಿರುವ ಹೋಟೆಲ್‌ನಿಂದ ಅವರನ್ನು ರಕ್ಷಿಸಲಾಯಿತು.ಪೊಲೀಸರು ಅಲ್ತಾಫ್ (19) ಮತ್ತು ಓಂ (21) ಎಂದು ಗುರುತಿಸಲಾದ ಆರೋಪಿಗಳನ್ನು ಸಹ ಬಂಧಿಸಿದ್ದಾರೆ. ಪೊಲೀಸರ ಬಳಿ ಬಾಲಕಿಯರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಇಬ್ಬರು ಆರೋಪಿಗಳು ಹುಟ್ಟುಹಬ್ಬ ಆಚರಣೆಗೆಂದು ಕಾಯ್ದಿರಿಸಿದ ಹೋಟೆಲ್ ಕೊಠಡಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಗೋವಾ ಮಕ್ಕಳ ಕಾಯ್ದೆಯಡಿಯಲ್ಲಿ ಅತ್ಯಾಚಾರ ಮತ್ತು ಅಪಹರಣದ ಆರೋಪಗಳನ್ನು ಹೊರಿಸಲಾಗಿದೆ.
ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾದ ನಂತರ ಪೊಲೀಸರು ಹೋಟೆಲ್ ಮಾಲೀಕರನ್ನು ಬಂಧಿಸಿದ್ದಾರೆ. ಮತ್ತು ಪೋಷಕರ ಅನುಪಸ್ಥಿತಿಯಲ್ಲಿ ಅಪ್ರಾಪ್ತ ವಯಸ್ಕರಿಗೆ ಕೊಠಡಿಗಳನ್ನು ಹೇಗೆ ನೀಡಲಾಯಿತು ಎಂದು ಪ್ರಶ್ನಿಸಿದರು.
ಮತ್ತೊಂದು ಘಟನೆ ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿ ಕರೆದೊಯ್ದು ಅತ್ಯಾಚಾರ, ಇಟ್ಟಿಗೆಯಿಂದ ಹಲ್ಲೆ ಚಾಕೊಲೇಟ್ ಆಮಿಷವೊಡ್ಡಿ 4 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಪಕ್ಕದ ಮನೆಯ ವ್ಯಕ್ತಿ ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಬಳಿಕ ಇಟ್ಟಿಗೆಯಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಮಂಗಳವಾರ ಸಂಜೆ ಕಾನ್ಪುರ ನಗರ ಜಿಲ್ಲೆಯ ಘಟಂಪುರದಲ್ಲಿ ಈ ಘಟನೆ ನಡೆದಿದೆ.
ಸಂಜೆ 5.30 ರ ಸುಮಾರಿಗೆ ಬಾಲಕಿ ಹತ್ತಿರದ ಅಂಗಡಿಗೆ ಹೋಗಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ .ಅಂಗಡಿಯ ಬಳಿ, ಅದೇ ಪ್ರದೇಶದ ಯುವಕನೊಬ್ಬ ಬಾಲಕಿ ಬಳಿ ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಅಂಗಡಿಯ ಹಿಂದಿನ ಪೊದೆಯೊಳಗೆ ಕರೆದೊಯ್ದಿದ್ದ. ಬಾಲಕಿ ನೋವಿನಿಂದ ಕಿರುಚಿದಾಗ, ಆರೋಪಿ ಆಕೆಯ ಬಾಯಿಯೊಳಗೆ ಎಲೆಗಳನ್ನು ತುರುಕಿದ್ದಾನೆ.
ಆಕೆ ಅಳುತ್ತಲೇ ಇದ್ದಳು. ಆ ವ್ಯಕ್ತಿ ಹತ್ತಿರದಲ್ಲಿ ಇರಿಸಲಾಗಿದ್ದ ಇಟ್ಟಿಗೆಯಿಂದ ಆಕೆಗೆ ಹಲವಾರು ಬಾರಿ ಹೊಡೆದು ಬಾಲಕಿಯನ್ನು ರಕ್ತದ ಮಡುವಿನಲ್ಲಿ ಬಿಟ್ಟು ಓಡಿಹೋಗಿದ್ದಾನೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ ಬಾಲಕಿಯ ತಂದೆ, ನನ್ನ ಮಗಳು ಸಂಜೆ 5.30 ರ ಸುಮಾರಿಗೆ ಹತ್ತಿರದ ಅಂಗಡಿಗೆ ಹೋಗಿದ್ದಳು. 10 ರಿಂದ 15 ನಿಮಿಷಗಳಾದರೂ ಆಕೆ ಹಿಂತಿರುಗದಿದ್ದಾಗ, ಅವಳ ತಾಯಿ ಆಕೆಯನ್ನು ಹುಡುಕಲು ಹೋಗಿದ್ದಳು.








