ಕಾಸರಗೋಡು ಕಡಲ ತೀರಕ್ಕೆ ಅಪರೂಪದ ಅತಿಥಿ ಆಗಮನ…!

ಕಾಸರಕೋಡು

     ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆಯಾಗಿದೆ. ಇದು ಚಿಕ್ಕ ಶಾರ್ಕ್ ಗಳ ಜಾತಿಯಲ್ಲಿ  ಒಂದಾಗಿದ್ದು, ಸುಮಾರು 1 ಅಡಿ ಉದ್ದವನ್ನು ಹೊಂದಿದೆ. ಕಡಲತೀರಗಳಲ್ಲಿ ಅಪರೂಪವಾಗಿ ಈ ಮೀನುಗಳು ಕಂಡು ಬರುತ್ತವೆ.

     ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್‌ನ ವ್ಯವಸ್ಥಾಪಕ ವಿನೋದ್ ಎಸ್ ಸಿದ್ಲಾನಿ ಹೇಳಿದ್ದಾರೆ.

 
    ನಾಚಿಕೆ ಸ್ವಭಾವವುಳ್ಳ ಮೀನು ಇದಾಗಿದ್ದು, ಸಾಮಾನ್ಯವಾಗಿ ಯಾರ ಕಣ್ಣಿಗೂ ಇದು ಬೀಳುವುದಿಲ್ಲ ಎಂದು ತಿಳಿಸಿದ್ದಾರೆ.  ಈ ಮೀನು ಫೈಟೊಪ್ಲಾಂಕ್ಟನ್ ಮತ್ತು ಝೂಪ್ಲ್ಯಾಂಕ್ಟನ್ಗಳನ್ನು ತಿನ್ನುತ್ತದೆ. ಈ ಮೀನುಗಳು ಬೇಟೆಯಾಡಲು ದೇಹದಿಂದಲೇ ವಿದ್ಯುತ್ ರೀತಿಯ ಧಾನ್ಯವನ್ನು ಉತ್ಪಾದಿಸಿ ಹೊರಗೆ ಬಿಡುತ್ತವೆ. ಸಮುದ್ರದ ಆಳದಲ್ಲಿ ವಾಸಿಸುವ ಮೀನುಗಳು, ಮೇಲೆ ಬರುವುದು ಅತ್ಯಂತ ವಿರಳ ಎಂದು ಮತ್ತೊಬ್ಬ ಸಂಶೋಧಕ ಕಿರಣ್ ವಾಸುದೇವಮೂರ್ತಿ ಹೇಳಿದ್ದಾರೆ.
   ಈ ಮೀನು ತಲೆಯ ಎರಡೂ ಬದಿಯಲ್ಲಿ ಪೆಕ್ಟೋರಲ್ ರೆಕ್ಕೆಗಳನ್ನು ಹೊಂದಿರುವ ಚಪ್ಪಟೆಯಾದ ಮುಂಭಾಗವನ್ನು ಹೊಂದಿರುತ್ತದೆ. ದೊಡ್ಡ ಶಾರ್ಕ್ಗಳಂತೆ ಇವೂ ಕೂಡ ಮರಿಗಳಿಗೆ ಜನ್ಮ ನೀಡುತ್ತದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
   

Recent Articles

spot_img

Related Stories

Share via
Copy link
Powered by Social Snap