ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ರಷ್ಮಿಕ ರಾಯಭಾರಿ!

ನವದೆಹಲಿ: 

   ಡೀಪ್ ಫೇಕ್ ವಿಡಿಯೋಗಳಿಗೆ ತುತ್ತಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಇದೀಗ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ.

   ಈ ಕುರಿತು ಖುದ್ದು ನಟಿ ವಿಷಯ ತಿಳಿಸಿದ್ದು, ‘ಕೆಲವು ವರ್ಷಗಳ ಹಿಂದೆ ನನ್ನ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಗೊತ್ತೇ ಇದೆ. ಅದು ಸೈಬರ್ ಕ್ರೈಂ. ಅದರ ನಂತರ ನಾನು ಸೈಬರ್ ಅಪರಾಧಗಳ ವಿರುದ್ಧ ಹೋರಾಡಬೇಕು ಎಂದು ಯೋಚಿಸಿದೆ.

   ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಬೇಕು ಎಂದುಕೊಂಡಿದ್ದೆ. ಆ ನಿಮಿತ್ತ ಕಾರ್ಯಯೋಜನೆ ರೂಪಿಸಿದ್ದೆ ಎಂದು ತಮ್ಮ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ ನಾನು ಕೇಂದ್ರ ಸರ್ಕಾರದ ಜೊತೆಗೆ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಸೈಬರ್ ಕ್ರಿಮಿನಲ್‌ಗಳು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ.

   ನಾವು ಎಚ್ಚರವಾಗಿರುವುದು ಮಾತ್ರವಲ್ಲದೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಮತ್ತು ಸೈಬರ್ ಅಪರಾಧಗಳ ವಿರುದ್ಧ ಕೆಲಸ ಮಾಡಬೇಕು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಬ್ರಾಂಡ್ ಅಂಬಾಸಿಡರ್ ಆಗಿ ನಾನು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸೈಬರ್ ಅಪರಾಧಗಳಿಂದ ದೇಶವನ್ನು ರಕ್ಷಿಸಬೇಕು ಎಂದು ಅದು ಹೇಳಿದೆ ಎಂದು ನಟಿ ಹೇಳಿದ್ದಾರೆ.

   ಇನ್ನು ಕೆಲ ದಿನಗಳ ಹಿಂದೆ ರಶ್ಮಿಕಾ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿದ್ದು ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಹಲವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಎನ್ನುವ ವಿಡಿಯೋ ಒಂದಕ್ಕೆ ಇನ್ನೊಬ್ಬರ ಮುಖವನ್ನು ಹಾಕಿ ವಿಡಿಯೋ ಮಾಡುವ ಭಯಾನಕ ತಂತ್ರ ಈ ಡೀಪ್​ ಫೇಕ್​. ಇದಾಗಲೇ ಕೆಲವರಿಗೆ ಈ ಕೆಟ್ಟ ಅನುಭವವಾಗಿದ್ದರೂ, ನಟಿ ರಶ್ಮಿಕಾ ಮಂದಣ್ಣ ಅವರ ಪ್ರಕರಣದಿಂದಾಗಿ ಇದು ಭಾರಿ ಸುದ್ದಿಗೆ ಗ್ರಾಸವಾಗಿತ್ತು.

  ಇದಾದ ಬಳಿಕ ಬಾಲಿವುಡ್​ ನಟಿಯರಾದ ಕಾಜೋಲ್​, ಆಲಿಯಾ ಸೇರಿದಂತೆ ಹಲವು ನಟಿಯರ ವಿಡಿಯೋಗಳು ಕೂಡ ಇದೇ ರೀತಿ ವೈರಲ್ ಆಗಿತ್ತು.

Recent Articles

spot_img

Related Stories

Share via
Copy link