ದೆಹಲಿ ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ

ನವದೆಹಲಿ : 

    ರಶ್ಮಿಕಾ ಮಂದಣ್ಣ ದೆಹಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿವೆ. ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಟಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ದೇಶದಾದ್ಯಂತ ಈ ನಡೆಯನ್ನು ಖಂಡಿಸಿ, ಅನೇಕರು ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಇದರ ವಿರುದ್ದದ ಕ್ರಮಕ್ಕೆ ಒತ್ತಾಯ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಕ್ರಮಕ್ಕೆ ಮುಂದಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಪೊಲೀಸರು ಅರೆಸ್ಟ್ ಕೂಡ ಮಾಡಿದ್ದಾರೆ.

   ರಶ್ಮಿಕಾಗೆ (ಈ ಡೀಪ್‌ಫೇಕ್ ವಿಡಿಯೋ ಕಾಟ ನಿದ್ದೆಗೆಡಿಸಿತ್ತು. ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾಕಷ್ಟು ಜನರು ಒತ್ತಾಯಿಸಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಆಸಾಮಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿತ್ತು. ರಶ್ಮಿಕಾ ಸೇರಿದಂತೆ ಹಲವರ ಡೀಪ್‌ಫೇಕ್ ವಿಡಿಯೋ ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಆರೋಪಿ ಬಂಧನದ ಬಳಿಕ ರಶ್ಮಿಕಾ ಪ್ರತಿಕ್ರಿಯೆ ಕೂಡ ನೀಡಿದ್ದರು.

    ಆಂಧ್ರ ಪ್ರದೇಶದ ಗುಂಟೂರು ಮೂಲದ ನವೀನ್ ಈಮಾನಿ (24) ಬಂಧಿತ ಆರೋಪಿಯಾಗಿದ್ದು, ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಫ್ಯಾನ್ ಪೇಜ್ ಅನ್ನು ನಿರ್ವಹಣೆ ಮಾಡುತ್ತಿದ್ದರು.

    ಬಂಧಣದ ಬಳಿಕ ದೆಹಲಿ ಪೊಲೀಸರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಕೃತ್ಯದ ಜವಾಬ್ದಾರರನ್ನು ಬಂಧಿಸಿದ್ದಕ್ಕಾಗಿ ಧನ್ಯವಾದಗಳು. ಹುಡುಗಿಯೇ ಮತ್ತು ಹುಡುಗರೇ- ನಿಮ್ಮ ಒಪ್ಪಿಗೆಯಿಲ್ಲದೇ ನಿಮ್ಮ ಚಿತ್ರವನ್ನು ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ. ಅದು ತಪ್ಪು, ನಿಮ್ಮನ್ನು ಬೆಂಬಲಿಸುವ ಜನರಿಂದ ನೀವು ಸುತ್ತುವರೆದಿರುವಿರಿ ಮತ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಇದು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದರು.

    ಡೀಪ್‌ಫೇಕ್ ವಿಡಿಯೋ ಮಾಡುತ್ತಿದ್ದ ಆರೋಪಿ ಬಂಧನವಾಗಿದ್ದಕ್ಕೆ ದೆಹಲಿ ಪೊಲೀಸರಿಗೆ ಅಭಿಮಾನಿಗಳು ಕೂಡ ಧನ್ಯವಾದಗಳನ್ನು ತಿಳಿಸಿದ್ದರು. ಈಗ ಪೊಲೀಸರ ಕರೆಯ ಮೇರೆ ಹಾಜರಾಗಿ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ

Recent Articles

spot_img

Related Stories

Share via
Copy link
Powered by Social Snap