ಅಭಿಮಾನಿಗಳಿಗೆ ಹೊಸ ಟಾಸ್ಕ್‌ ನೀಡಿದ ಸಾನ್ವಿ..!

ಬೆಂಗಳೂರು:

     ಪ್ಯಾನ್ ಇಂಡಿಯಾ ನಾಯಕಿ ರಶ್ಮಿಕಾ ಮಂದಣ್ಣ ಅವರು ವ್ಯಾಲೆಂಟೈನ್ಸ್ ಡೇ ದಿನಕ್ಕಾಗಿ ಅಭಿಮಾನಿಗಳಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ. ಅಭಿಮಾನಿಗಳು ಈ ಟಾಸ್ಕ್ ಗೆಲ್ಲುತ್ತಾರೋ ಕಾದು ನೋಡಬೇಕು. ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್‌ನಲ್ಲಿ ಅವರಿಗೆ ಸಖತ್ ಬೇಡಿಕೆಯಿದೆ.

    ಸದ್ಯ ರಶ್ಮಿಕಾ ‘ಪುಷ್ಪ 2’ ಮತ್ತು ‘ಆನಿಮಲ್’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ರಶ್ಮಿಕಾ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿರುವ ಪೋಸ್ಟ್ ತುಂಬಾ ವೈರಲ್ ಆಗಿದೆ. ಅದೇನೆಂದರೆ ‘ನನ್ನ ವ್ಯಾಲೆಂಟೈನ್ ಯಾರೆಂದು ಊಹಿಸಿ?’ ಎಂದು ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದಾರೆ.

    ಇದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಇದು ಕೆಲವು ಬ್ರಾಂಡ್‌ಗಳ ಪ್ರಚಾರಕ್ಕಾಗಿ ಗಿಮಿಕ್ ಆಗಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ರಶ್ಮಿಕಾ ಉತ್ತರಕ್ಕಾಗಿ ಫೆಬ್ರವರಿ 14ರ ವರೆಗೆ ಕಾಯಬೇಕು ಎಂದು ಕೆಲವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap