‘ನಾನು ಹೈದರಾಬಾದ್​ನವಳು’ : ಹೆಮ್ಮೆಯಿಂದ ಹೇಳಿದ ರಶ್ಮಿಕಾ…!

ತೆಲಂಗಾಣ :

    ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಅವರನ್ನು ದ್ವೇಷಿಸುವವರ ಸಂಖ್ಯೆ ದೊಡ್ಡದಿದೆ. ಇದಕ್ಕೆ ಕಾರಣ ಹಲವು. ಈಗ ಅವರನ್ನು ಟ್ರೋಲ್ ಮಾಡಲು ಹೊಸ ಕಾರಣ ಸಿಕ್ಕಿದೆ. ರಶ್ಮಿಕಾ ಅವರು ‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನು ಅನೇಕರು ಟ್ರೋಲ್ ಮಾಡುತ್ತಾ ಇದ್ದಾರೆ. ಅವರ ಹೇಳಿಕೆ ಚರ್ಚೆಗೆ ಕಾರಣ ಆಗಿದೆ.

 

   ‘ನಾನು ಹೈದರಾಬಾದ್​ನವಳು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದುಕೊಳ್ಳುತ್ತೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಕನ್ನಡಿಗರು ರಶ್ಮಿಕಾ ಬಗ್ಗೆ ಟೀಕೆ ಹೊರಹಾಕಿದ್ದಾರೆ.

   ‘ರಶ್ಮಿಕಾ ಯಾವಾಗ ಹೈದರಾಬಾದ್​ನವರಾದರು? ಇದನ್ನು ಜನನ ಪ್ರಮಾಣಪತ್ರದಲ್ಲಿ ಸೇರಿಸಿದ್ದಾರಾ’ ಎಂದು ಕೆಲವರು ಕೇಳಿದ್ದಾರೆ. ಇನ್ನೂ ಕೆಲವರು, ‘ವಿಜಯ್ ದೇವರಕೊಂಡ ಅವರನ್ನು ವಿವಾಹ ಆಗುವ ಮೊದಲೇ ರಶ್ಮಿಕಾ ಹೈದರಾಬಾದ್​ನವರಾಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ‘ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ‘ನಿಮ್ಮನ್ನು ದ್ವೇಷಿಸಲು ನಿತ್ಯ ಹೊಸ ಹೊಸ ಕಾರಣ ನೀಡುತ್ತೀರಿ’ ಎಂದು ಕೆಲವರು ಹೇಳಿದ್ದಾರೆ. 

   ರಶ್ಮಿಕಾ ಮಂದಣ್ಣ ಅವರು ಈ ರೀತಿಯ ಹೇಳಿಕೆಯನ್ನು ಈ ಮೊದಲಿನಿಂದಲೂ ನೀಡುತ್ತಾ ಬರುತ್ತಿದ್ದಾರೆ. ಈ ಮೊದಲು ಅವರು ‘ನನಗೆ ಕನ್ನಡವೂ ಬರಲ್ಲ’ ಎಂದು ಸಂದರ್ಶನ ಒಂದರಲ್ಲಿ ಹೇಳಿ ಟೀಕೆಗೆ ಗುರಿಯಾಗಿದ್ದರು. ಈಗ ಅವರ ಮೇಲೆ ದ್ವೇಷ ಹೆಚ್ಚುತ್ತಿದೆ.

Recent Articles

spot_img

Related Stories

Share via
Copy link