ಗುಬ್ಬಿ:
ಗುಬ್ಬಿ ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು ಎಚ್ ಎ ಎಲ್ ನಂತಹ ಬೃಹತ್ ಕಾರ್ಖಾನೆ ಬಂದಮೇಲಂತೂ ಮನೆಗಳ ಮೇಲೆ ಮನೆ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ ಅದೇ ರೀತಿ ಒಂದು ಮನೆಯ ಮೇಲೆ ಮೂರು ಮನೆ ಕಟ್ಟಿದಲ್ಲಿ ಮೂರು ಕಾರ್ ಗಳು ಐದಾರು ದ್ವಿಚಕ್ರ ವಾಹನಗಳು ಇರುವುದು ಸಾಮಾನ್ಯವಾಗಿದ್ದು ಇವುಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ರಸ್ತೆಗೆ ಶೀಟ್ ಹಾಕಿ ಕಾಲು ಬಾಗ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿಕೊಂಡಿದ್ದಾರೆ, ಈ ಬಗ್ಗೆ ಪಟ್ಟಣ ಪಂಚಾಯ್ತಿಗೆ ಗೊತ್ತಿದಿಯೋ ಇಲ್ಲವೋ ಗೊತ್ತಿಲ್ಲ ಯಾರು ಇಲ್ಲಿಯವರೆಗೂ ಗಮನಹರಿಸದೆ ಇರುವುದು ಶೋಚನೀಯ,
ಗುಬ್ಬಿ ಪಟ್ಟಣದ ಹೊಸಬಡಾವಣೆಯಿಂದ ಚನ್ನಶೆಟ್ಟಿಹಳ್ಳಿಗೆ ಸುಮಾರು 16 ಅಡಿಗಳಷ್ಟು ಕಾಲು ದಾರಿ ನೂರಾರು ವರ್ಷಗಳಿಂದ ಇತ್ತು ಆದರೆ ಇತ್ತೀಚೆಗೆ ಆ ದಾರಿಯನ್ನು ಮುಚ್ಚಿ ಮನೆ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು ಈ ಬಗ್ಗೆ ಅಧಿಕಾರಿಗಳು ನಿರ್ಧಾಕ್ಷಣ್ಯ ಕ್ರಮ ತೆಗೆದುಕೊಳ್ಳುವ ಅಗತ್ಯತೆಯಿದೆ ಇಲ್ಲವಾದಲ್ಲಿ ಪ್ರಭಾವಿಗಳು ಈಗಾಗಲೇ ಸರ್ಕಾರಿ ಆಸ್ತಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ,ಈ ಬಗ್ಗೆ ಅಲ್ಲಿನ ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಅಧಿಕಾರಿಗಳು ಜಾಣ ಮೌನವಾಗಿರುವುದು ಏಕೆಂದು ಗೊತ್ತಾಗುತ್ತಿಲ್ಲ,
ಪಟ್ಟಣದ ಪ್ರಮುಖ ಬಡಾವಣೆಗಳಾದ ಮಹಾಲಕ್ಷ್ಮಿ ನಗರ, ಮಾರುತಿ ನಗರ, ಕುವೆಂಪು ನಗರ, ಶ್ರೀನಗರ ಬಡಾವಣೆಗಳಲ್ಲಿ ಮನೆಯ ಮಾಲೀಕರು ರಸ್ತೆಗೆ ಕಾರುಗಳನ್ನು ನಿಲ್ಲಿಸುವ ಶೆಡ್ ಮಾಡಿಕೊಂಡಿದ್ದಾರೆ ಆದರೂ ಇವರುಗಳನ್ನು ಯಾರು ಕೇಳುವವರೇ ಇಲ್ಲದಂತಾಗಿದೆ,
ಈಗಾಗಲೇ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗಳನ್ನು ಚರಂಡಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದ್ದು ಇವುಗಳು ನೆಪಮಾತ್ರಕ್ಕೆ ಆದರೆ ಸ್ಥಳದಲ್ಲಿ ಏನೂ ಇರುವುದಿಲ್ಲ ಎನ್ನುವಹಾಗಾಗಿದೆ
