ತಾವು ಕೋಚ್‌ ಮಾಡಿದ ಶ್ರೇಷ್ಠ ಆಟಗಾರನನ್ನು ಹೆಸರಿಸಿದ ರವಿ ಶಾಸ್ತ್ರಿ!

ನವದೆಹಲಿ: 

    ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯನ್ನು ಭಾರತ ತಂಡದ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ತಾನು ಕೋಚ್‌ ಮಾಡಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಶ್ರೇಷ್ಠ ಆಟಗಾರ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಶ್ಲಾಘಿಸಿದ್ದಾರೆ. ವಿರಾಟ್‌ ಕೊಹ್ಲಿ ಹಾಗೂ ರವಿ ಶಾಸ್ತ್ರಿ 2021ರ ವರೆಗೆ ಭಾರತ ಕ್ರಿಕೆಟ್‌ ತಂಡದಲ್ಲಿದ್ದರು. ಕೊಹ್ಲಿ ಭಾರತದ ನಾಯಕನಾಗಿದ್ದರೆ, ರವಿ ಶಾಸ್ತ್ರಿ ಹೆಡ್‌ ಕೋಚ್‌ ಆಗಿದ್ದರು. ರವಿ ಶಾಸ್ತ್ರಿ ಅಡಿಯಲ್ಲಿ ವಿರಾಟ್‌ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು.

   ಸ್ಕೈ ಸ್ಪೋರ್ಟ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ರವಿ ಶಾಸ್ತ್ರಿ, “ತನ್ನ ಆಡಂಬರದಲ್ಲಿರುವ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿಯನ್ನು ನಂಬಲಾಗದವರು ಎಂದು ನಾನು ಹೇಳುತ್ತೇನೆ. ಏಕೆಂದರೆ ಭಾರತ ತಂಡ ಕೆಂಪು ಚೆಂಡಿನ ಸ್ವರೂಪದಲ್ಲಿ ಅಗ್ರ ಸ್ಥಾನದಲ್ಲಿದ್ದ ಆ ಐದು ವರ್ಷಗಳಲ್ಲಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಎಲ್ಲಾ ಸ್ವರೂಪಗಳಲ್ಲಿ ಅವರು ಆಡಿದ ಕೆಲವು ಇನಿಂಗ್ಸ್‌ಗಳು ಅವಾಸ್ತವಿಕವಾಗಿದ್ದವು,” ಎಂದು ಶ್ಲಾಘಿಸಿದ್ದಾರೆ.

   “ನಾನು ಹೆಡ್‌ ಕೋಚ್‌ ಕೆಲಸವನ್ನು ವಹಿಸಿಕೊಂಡ ನಂತರ ಮತ್ತು ಧೋನಿ ಆಟ ಮುಗಿದ ನಂತರ, ಅವರು (ವಿರಾಟ್‌ ಕೊಹ್ಲಿ) ಅದ್ಭುತ ಕೆಲಸ ಮಾಡಿದರು. ಬ್ಯಾಟ್ಸ್‌ಮನ್ ಆಗಿ ಅವರ ಪ್ರಾಥಮಿಕ ಕೌಶಲಗಳು, ಪ್ರಾಬಲ್ಯ ಸಾಧಿಸುವ ಸಾಮರ್ಥ್ಯ, ಮುಖಾಮುಖಿಯಾಗಿರುವುದು, ಕಠಿಣವಾಗಿ ಆಡುವುದು ಆದರೆ ನ್ಯಾಯಯುತವಾಗಿ ಆಡುವುದು ಮತ್ತು ಪಂದ್ಯವನ್ನು ಗೆದ್ದು ಮುಂದಕ್ಕೆ ಕೊಂಡೊಯ್ಯುವ ಅವರ ಬಯಕೆ ಅಸಾಧಾರಣವಾಗಿತ್ತು ಎಂದು ನಾನು ಭಾವಿಸುತ್ತೇನೆ,” ಎಂದು ರವಿ ಶಾಸ್ತ್ರಿ ವಿವರಿಸಿದ್ದಾರೆ. 

   ಭಾರತ ತಂಡದ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಅವರ ಅಧಿಕಾರಾವಧಿಯು ಯಾವುದೇ ಐಸಿಸಿ ಟ್ರೋಫಿಗಳನ್ನು ನೀಡದಿದ್ದರೂ ಸಹ ಅವರ ಕಾರ್ಯ ಸ್ಮರಣೀಯ ಕ್ಷಣಗಳಿಂದ ಗುರುತಿಸಲ್ಪಟ್ಟಿದೆ. ಅವರ ಅಧಿಕಾರಾವಧಿಯಲ್ಲಿ ಭಾರತ ತಂಡ ದೀರ್ಘಕಾಲದ ಅನುಪಸ್ಥಿತಿಯ ನಂತರ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಮರಳಿತ್ತು. ತವರು ನೆಲದಲ್ಲಿ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಅದ್ಭಯತ ದಾಖಲೆಯನ್ನು ಹೊಂದಿದೆ. 

   ರವಿ ಶಾಸ್ತ್ರಿ ಅವಧಿಯಲ್ಲಿ ವಿರಾಟ್‌ ಕೊಹ್ಲಿ ಅವರ ಜೊತೆಗೆ ಚೇತೇಶ್ವರ್‌ ಪೂಜಾರ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ ಹಾಗೂ ಜಸ್‌ಪ್ರೀತ್‌ ಬುಮ್ರಾ ಕೂಡ ಆಡಿದ್ದರು. ಆದರೆ, ತಮ್ಮ ಕೋಚಿಂಗ್‌ ಅವಧಿಯಲ್ಲಿ ವಿರಾಟ್‌ ಕೊಹ್ಲಿಯೇ ಅತ್ಯುತ್ತಮ ಆಟಗಾರ ಎಂದು ರವಿ ಶಾಸ್ತ್ರಿ ಬಣ್ಣಿಸಿದ್ದಾರೆ. 

  “ವಿರಾಟ್‌ ಕೊಹ್ಲಿ ಎಂಬ ಬ್ಯಾಟ್ಸ್‌ಮನ್ ನಂಬಲಾಗದವನು ಎಂದು ನಾನು ಹೇಳುತ್ತೇನೆ. ಭಾರತ ತಂಡ ಕೆಂಪು ಚೆಂಡಿನ ಸ್ವರೂಪದಲ್ಲಿ ನಂ. 1 ಆಗಿದ್ದಾಗ ಆ ಐದು ವರ್ಷಗಳಲ್ಲಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನಲ್ಲಿ ಅವರು ಆಡಿದ ಕೆಲವು ಇನಿಂಗ್ಸ್‌ಗಳು ಅವಾಸ್ತವಿಕವಾಗಿದ್ದವು,” ಎಂದು ಅವರು ಶ್ಲಾಘಿಸಿದ್ದಾರೆ.

   “ಬೆನ್ ಸ್ಟೋಕ್ಸ್ ವಿರುದ್ಧ ಆಡಲು ನನಗೆ ತುಂಬಾ ಇಷ್ಟವಾಗುತ್ತಿತ್ತು; ಅವರು ವಿಶ್ವ ದರ್ಜೆಯ ಆಲ್‌ರೌಂಡರ್. ಅವರ ಜೊತೆಗೆ ತುಂಬಾ ಕ್ರಿಕೆಟಿಗರಿದ್ದಾರೆ. ನೀವು ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವನ್ನು ನೋಡಿ – ಕಮಿನ್ಸ್, ಹ್ಯಾಝಲ್‌ವುಡ್, ನೇಥನ್ ಲಯಾನ್. ನಾನು ಅವರ ಜೊತೆಗೆ ಎಡಗೈ ಸ್ಪಿನ್ನರ್ ಆಗಿ ಆಡಬಹುದಿತ್ತು,” ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link