ಆರ್‌ಸಿಬಿ ಮೊದಲ ಫೈನಲ್‌ ಸೋಲಿಗೂ, ಚೊಚ್ಚಲ ಟ್ರೋಫಿ ಗೆಲುವಿಗೂ ಇದೆ ಸಾಮ್ಯತೆ….!

ಬೆಂಗಳೂರು:

     ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ  ತನ್ನ ನಾಲ್ಕನೇ ಫೈನಲ್‌ ಪ್ರವೇಶದಲ್ಲಿ ಚೊಚ್ಚಲ ಐಪಿಎಲ್‌ ಕಪ್‌ ಗೆದ್ದು ಸಂಭ್ರಮಿಸಿದೆ. ಮಂಗಳವಾರ ನಡೆದಿದ್ದ ಪ್ರಶಸ್ತಿ ಕಾಳಗದಲ್ಲಿ  ಪಂಜಾವ್‌ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಈ ಹಿಂದೆ 2009ರಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿ ಸೋತ್ತಿತ್ತು. ಈ ಸೋಲು ಮತ್ತು ಚೊಚ್ಚಲ ಟ್ರೋಫಿ ಗೆದ್ದಿರುವಲ್ಲಿ ಸಾಮತ್ಯೆಯೊಂದು ಕಂಡುಬಂದಿದೆ.

    ಹೌದು, ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌ ಆಡಿದ್ದು 2009ರಲ್ಲಿ. ಡೆಕ್ಕನ್‌ ಚಾರ್ಜಸ್‌ ಎದುರು. ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಕ್ಕನ್‌ 6 ವಿಕೆಟ್‌ಗೆ 143 ರನ್‌ ಬಾರಿಸಿತು. ಅನಿಲ್‌ ಕುಂಬ್ಳೆ 16ಕ್ಕೆ 4 ವಿಕೆಟ್‌ ಉರುಳಿಸಿದ್ದರು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್‌ಸಿಬಿ ಬ್ಯಾಟರ್‌ಗಳು 9ಕ್ಕೆ 137 ರನ್‌ ಮಾಡಿ 6 ರನ್‌ ಸೋಲಿನಿಂದ ಚೊಚ್ಚಲ ಕಪ್‌ ಕೈಚೆಲ್ಲಿತ್ತು.

   ಕಾಕತಾಳಿಯ ಎನ್ನುವಂತೆ ಆರ್‌ಸಿಬಿ ತನ್ನ ಚೊಚ್ಚಲ ಕಪ್‌ ಗೆದ್ದಿರುವುದು ಕೂಡ 6 ರನ್‌ ಅಂತರದಿಂದಲೇ. ಹೀಗಾಗಿ ಚೊಚ್ಚಲ ಸೋಲಿಗೂ ಮತ್ತು ಚೊಚ್ಚಲ ಫೈನಲ್‌ ಗೆಲುವಿಗೂ 6 ರನ್‌ ಕಾರಣವಾಯಿತು. ಅಂದು ಕಂಟಕವಾಗಿದ್ದ 6 ರನ್‌ ಈ ಬಾರಿ ಆರ್‌ಸಿಯ ಕೈ ಹಿಡಿಯಿತು.

   ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು. ಆರ್‌ಸಿಬಿ ಗೆದ್ದು ಕಪ್‌ ಬರಗಾಲ ನೀಗಿಸಿತು.

Recent Articles

spot_img

Related Stories

Share via
Copy link