‘ಕೆಜಿಎಫ್ 2’ ಸಿನಿಮಾ ನೋಡಲು ಸಜ್ಜಾದ RCB ಟೀಮ್

IPL2022:

ಇದೇ ಮೊದಲ ಬಾರಿಗೆ ಸಿನಿಮಾ ಹಾಗೂ ಕ್ರೀಡೆಗೆ ಸಂಬಂಧಿಸಿದ ಬೆಂಗಳೂರಿನ ಎರಡು ಫ್ರಾಂಚೈಸಿಗಳು ಒಟ್ಟಿಗೆ ಸೇರುತ್ತಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಸಾಹಸ ಅಂತಲೇ ಹೇಳಬಹುದು. ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ತಂಡಗಳು ಒಟ್ಟಿಗೆ ಸೇರಲಿವೆ. ಹೊಸ ಸಾಹಸಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿ ನಿಂತಿವೆ.ಇಂದ ಹೊಂಬಾಳೆ ಫಿಲಂಸ್ ಹಾಗೂ ಆರ್‌ಸಿಬಿ ತಂಡ ಜನರಿಗೆ ಮನರಂಜನೆ ಜೊತೆ ಜೊತೆಗೆ ಕ್ರೀಡೆಯ ಥ್ರಿಲ್ ನೀಡಲು ಸಜ್ಜಾಗಿ ನಿಂತಿವೆ.

ರಾಮನವಮಿ ದಿನವೇ ಶ್ರೀರಾಮನ ಭಕ್ತರಿಗೆ ಸಿಹಿ ಸುದ್ದಿ: ಡಿ. 2023 ರೊಳಗೆ ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣ

ಆರ್‌ಸಿಬಿ ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಎರಡೂ ತಂಡಗಳೂ ಒಟ್ಟಿಗೆ ಸೇರಿದ್ದು, ಹೊಸ ಅಧ್ಯಾಯವನ್ನೇ ಬರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಎರಡೂ ಸಂಸ್ಥೆಗಳು ಮನರಂಜನೆಯ ಜೊತೆ ಜೊತೆಗೆ, ಗ್ಲಾಮರ್, ಸಿನಿಮಾ ಹಾಗೂ ಕ್ರೀಡೆಯ ಅದ್ಭುತ ಸಮ್ಮಿಲನ ಎಂದು ಹೇಳಿಕೊಂಡಿದೆ. ಇದರ ಮೊದಲ ಹಂತವಾಗಿ ಆರ್‌ಸಿಬಿ ತಂಡ ಕೆಜಿಎಫ್ 2 ಸಿನಿಮಾವನ್ನು ವೀಕ್ಷಣೆ ಮಾಡಲಿದೆ.

ಸತತ 4 ಪಂದ್ಯ ಸೋತ ಮುಂಬೈ ಇಂಡಿಯನ್ಸ್ ತಂಡಕ್ಕೆ ನೀತಾ ಅಂಬಾನಿಯಿಂದ ವಿಶೇಷ ಸಂದೇಶ

ಹೊಂಬಾಳೆ ಫಿಲಂಸ್ ಹಾಗೂ ಆರ್‌ಸಿಬಿ ಸಂಸ್ಥೆ ಒಂದಾಗಿದೆ ಅನ್ನುವುದೇನೋ ಸರಿ. ಆದರೆ, ಎರಡೂ ಸಂಸ್ಥೆ ಒಂದಾಗಿ ಏನು ಮಾಡುತ್ತೆ? ಅನ್ನುವ ಸ್ಪಷ್ಟತೆಯಿಲ್ಲ. ಆದರೆ, ಸಹಯೋಗದ ಅಸಲಿ ಸೀಕ್ರೆಟ್ ಇಲ್ಲಿದೆ. ಆರ್‌ಸಿಬಿ ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಒಬ್ಬರಿಗೊಬ್ಬರು ಸಹಕಾರ ನೀಡಲಿದ್ದಾರೆ. ಇದರ ಮೊದಲ ಭಾಗವಾಗಿ ಆರ್‌ಸಿಬಿ ಆಟಗಾರರು ಏಪ್ರಿಲ್ 14ರಂದು ‘ಕೆಜಿಎಫ್ 2’ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link