ಹೊಸ ದಾಖಲೆ ಬರೆದ RCB…!

ಲಕ್ನೋ: 

    ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ  ಅವರ ಅಜೇಯ 85 ರನ್‌ಗಳ (33 ಎಸೆತ) ಅಮೋಘ ಆಟದಿಂದ ಮಂಗಳವಾರ ನಡೆದಿದ್ದ ಐಪಿಎಲ್‌ ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್‌ ತಂಡವನ್ನು ಸೋಲಿಸಿ ಮೊದಲ ಕ್ವಾಲಿಫೈಯರ್‌ ಆಡುವ ಅವಕಾಶ ಪಡೆಯಿತು. ಗೆಲುವಿನ ಮೂಲಕ ಆರ್‌ಸಿಬಿ ಐಪಿಎಲ್‌ ಇತಿಹಾಸದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದೆ.

    ಲಕ್ನೋ ವಿರುದ್ಧದ ಗೆಲುವಿನೊಂದಿಗೆ ಆರ್‌ಸಿಬಿ ಹಾಲಿ ಆವೃತ್ತಿಯಲ್ಲಿ ತವರಿನಾಚೆ ಆಡಿದ ಎಲ್ಲ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಆವೃತ್ತಿಯೊಂದರಲ್ಲಿ ಎದುರಾಳಿ ನೆಲದಲ್ಲಿ ಆಡಿದ ಲೀಗ್‌ನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಆರ್‌ಸಿಬಿ ಈ ಬಾರಿ ಕೋಲ್ಕತ, ಚೆನ್ನೈ, ಮುಂಬೈ, ಜೈಪುರ, ಮುಲ್ಲನ್‌ಪುರ, ನವದೆಹಲಿ, ಲಕ್ನೋದಲ್ಲಿ ಪಂದ್ಯ ಆಡಿತ್ತು.

ಅತಿ ಹೆಚ್ಚು ಗೆಲುವು

7 ರಲ್ಲಿ 7 – ಆರ್‌ಸಿಬಿ (2025)

8 ರಲ್ಲಿ 7 – ಕೆಕೆಆರ್ (2012)

8 ರಲ್ಲಿ 7 – ಮುಂಬೈ (2012)

    ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ರಿಷಭ್‌ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿತು. ಪಂಜಾಬ್‌ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 29ರಂದು ನಡೆಯುವ ಮೊದಲ ಕ್ವಾಲಿಫೈಯರ್‌ನಲ್ಲಿ ಎದುರಾಗಲಿವೆ.

   ಆರ್‌ಸಿಬಿ ಈ ಬೃಹತ್‌ ಮೊತ್ತವನ್ನು ಚೇಸಿಂಗ್‌ ನಡೆಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸಿಂಗ್‌ ನಡೆಸಿದ ಮೂರನೇ ತಂಡ ಎಂಬ ಹಿರಿಮೆಗೆ ಪಾತ್ರವಾಯಿತು. 

ಐಪಿಎಲ್‌ನಲ್ಲಿ ಅತಿ ಹೆಚ್ಚು ಯಶಸ್ವಿ ರನ್ ಚೇಸಿಂಗ್‌

262 – ಪಂಜಾಬ್‌ (2024)

246 – ಹೈದರಾಬಾದ್‌ (2025)

228 – ಆರ್‌ಸಿಬಿ(2025)

224 – ರಾಜಸ್ಥಾನ್‌(2020)

224 – ರಾಜಸ್ಥಾನ್‌(2024)

Recent Articles

spot_img

Related Stories

Share via
Copy link