ಶಿರಸಿ:
ರಾಜ್ಯದ ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆ ಸ್ಕೊಡ್‌ವೆಸ್‌ನ ಅಧ್ಯಕ್ಷರಾಗಿ ಡಾ.ಹಿ.ಚಿ.ಬೋರಲಿಂಗಯ್ಯ ಹಾಗೂ ಕಾರ್ಯದರ್ಶಿಯಾಗಿ ಸರಸ್ವತಿ ಎನ್. ರವಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.
ನಿನ್ನೆ ಶಿರಸಿಯ ಉಂಚಳ್ಳಿಯ ಸರಸ್ವತಿ ಫಾರ್ಮ ನ ತುಡ್ವಿ ಮನೆಯಲ್ಲಿ ನಡೆದ ಸ್ಕೊಡ್‌ವೆಸ್‌ನ 20ನೇ ಸರ್ವ ಸಾಧಾರಣ ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ರಚನೆಯಾಗಿದ್ದು, ಅಧ್ಯಕ್ಷರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರೂ ಆದ ಡಾ.ಹಿ.ಚಿ.ಬೋರಲಿಂಗಯ್ಯ, ಉಪಾಧ್ಯಕ್ಷರಾಗಿ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕುಮಾರ ವಿ ಕೂರ್ಸೆ, ಕಾರ್ಯದರ್ಶಿಗಳಾಗಿ ಶ್ರೀಮತಿ ಸರಸ್ವತಿ ಎನ್ ರವಿ, ಸಹ-ಕಾರ್ಯದರ್ಶಿಗಳಾಗಿ ಶಿಕ್ಷಣ ತಜ್ಞ ಪ್ರೊ. ಕೆ.ಎನ್. ಹೊಸಮನಿ, ಖಜಾಂಚಿಗಳಾಗಿ ವಸಂತ ಹಾದಿಮನೆ, ಕಾರ್ಯಕಾರಿ ಸದಸ್ಯರಾಗಿ ದಯಾನಂದ ಅಗಾಸೆ ಹಾಗೂ ಶ್ರೀಮತಿ ಪ್ರತಿಭಾ ಭಟ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.








