ಶಿರಸಿ:
ಫಿಸಿಯೋಥೆರಪಿ ಚಿಕಿತ್ಸೆಗೆ ಸ್ಥಳಾವಕಾಶಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಡಾ. ವೆಂಕಟೇಶ ನಾಯ್ಕ ಮನವಿ ಮಾಡಿದ್ದಾರೆ. ಅವರು ಸಚಿವ ಮಾಂಕಾಳ್ ವೈದ್ಯ ರನ್ನು ಭೇಟಿ ಮಾಡಿದರು.ಆರು ತಾಲೂಕುಗಳಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಸ್ಕೊಡ್‌ವೆಸ್‌ನಿಂದ ಹೊಸ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದೂ ಡಾ. ವೆಂಕಟೇಶ ನಾಯ್ಕ ಹೇಳಿದ್ದಾರೆ.ಮರು ಸಮೀಕ್ಷೆಯಲ್ಲಿ ಗುರುತಿಸಿದ 830 ಎಂಡೋಸಲ್ಫಾನ್ ಬಾಧಿತರಿಗೆ ಯುಡಿಐಡಿ ಕಾರ್ಡ್ ನೀಡಲು ಕ್ರಮ ಕೈಗೊಳ್ಳುವಂತೆ ಸ್ಕೊಡ್‌ವೆಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಸಚಿವ ಮಂಕಾಳು ವೈದ್ಯರಿಗೆ ನೀಡಿದ ಮನವಿಯಲ್ಲಿ ಕೋರಿದ್ದಾರೆ.
ಸಚಿವರು ಶಿರಸಿಗೆ ಆಗಮಿಸಿದ ಸಂದರ್ಭದಲ್ಲಿ ಖುದ್ದು ಭೇಟಿ ಮಾಡಿದ ವೆಂಕಟೇಶ ನಾಯ್ಕ, ಮುಂದಿನ ಹಂತಗಳಲ್ಲಿ 18 ವರ್ಷ ಒಳಗಿನ ಎಂಡೋ ಬಾಧಿತರಿಗೆ ನಿರಂತರವಾಗಿ 2 ತಿಂಗಳುಗಳ ಕಾಲ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಯೋಜನೆ ರೂಪಿಸಿದ್ದು ಭಟ್ಕಳ, ಹೊನ್ನಾವರ,ಕುಮಟಾ,ಅಂಕೋಲಾ,ಶಿರಸಿ, ಸಿದ್ದಾಪುರಗಳಲ್ಲಿ ಹಂತ ಹಂತವಾಗಿ ನೀಡಲಾಗುವ ಪಿಸಿಯೋಥೆರಪಿ ಚಿಕಿತ್ಸೆಗೆ ಅಗತ್ಯ ಸ್ಥಳಾವಕಾಶ ಒದಗಿಸಿಕೊಡುವಂತೆಯೂ ಬಿನ್ನವಿಸಿದರು.ಮನವಿ ಸ್ವೀಕರಿಸಿದ ಸಚಿವರು ಎಂಡೋಸಲ್ಫಾನ್ ಬಾಧಿತರಿಗೆ ಅವಶ್ಯವಿರುವ ಎಲ್ಲಾ ಸಹಕಾರ, ಸಹಾಯ ನೀಡುವ ನೀಡುವ ಭರವಸೆ ನೀಡಿದರು.
