ಬೆಂಗಳೂರು :
ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಕ್ಕೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ನಿಗದಿಪಡಿಸಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
ಎಲ್ ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್ 1 ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.
1 ನೇ ತರಗತಿ ಪ್ರವೇಶಕ್ಕೆ 2024-25 ನೇ ಸಾಲಿನಿಂದ ಆಯಾ ಸಾಲಿನ ಜೂನ್ 1 ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ.
ಆದರೆ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಆದರೂ ಮಕ್ಕಳೂ ದಾಖಲಾತಿ ವಂಚಿತರಾಗುತ್ತಿದ್ದಾರೆ. ಹೀಗಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ಮಕ್ಕಳು ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳ ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪೋಷಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ