ಬೆಂಗಳೂರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಡಾ. ಎಸ್.ಸಿ.ರಮೇಶ್ ನಿಯಮ ಬಾಹಿರವಾಗಿ ಮತ್ತೊಮ್ಮೆ ಲಾಬಿಯಲ್ಲಿ ನಿರತರಾಗಿದ್ದು, ಇವರಿಗೆ ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ, ಪ್ರಮುಖ ಸಚಿವರೊಬ್ಬರು ಬೆಂಬಲವಾಗಿ ನಿಂತಿದ್ದಾರೆ.
ಸರ್ಕಾರದ ಅವಧಿ ಪೂರ್ಣಗೊಳ?ಳುವ ಮುನ್ನ ತಮ್ಮವರನ್ನು ಕುಲಪತಿ ಹುದ್ದೆಗೆ ಮತ್ತೊಮ್ಮೆ ಪ್ರತಿಷ್ಠಾಪಿಸಲು ಇವರು ತೀವ್ರ ಲಾಬಿಯಲ್ಲಿ ನಿರತರಾಗಿದ್ದಾರೆ.ಎಸ್.ಸಿ. ರಮೇಶ್ ಈಗಾಗಲೇ ಒಂದು ಅವಧಿಗೆ ಕುಲಪತಿಯಾಗಿ ಅಧಿಕಾರ ನಡೆಸಿದ ನಂತರ ಕಳೆದ ವರ್ಷ ತೀವ್ರ ಲಾಬಿ ನಡೆಸಿ ಒಂದು ವರ್ಷ ಕುಲಪತಿ ಹುದ್ದೆಗೆ ವಿಸ್ತರಣೆ ಪಡೆದುಕೊಂಡಿದ್ದರು.
ಇದೀಗ ಹೊಸ ಕುಲಪತಿ ಹುದ್ದೆಯ ಆಯ್ಕೆಗೆ ಸಂಬAಧಿಸಿದ ಪ್ರಕ್ರಿಯೆ ಆರಂಭಗೊಂಡಿದ್ದು, ಡಾ.ಎಸ್.ಸಿ ರಮೇಶ್ ( ಸ.ಚಿ.ರಮೇಶ್ ) ಅರ್ಜಿ ಹಾಕಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇವರ ಅರ್ಜಿ ಪರಿಗಣಿಸಬಾರದು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಎರಡು ಬಾರಿ ಕುಲಪತಿ ಹುದ್ದೆ ಗೇರಿದವರನ್ನು ಮತ್ತೊಂದು ಅವಧಿಗೆ ಪರಿಗಣಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ ಇದಕ್ಕೂ ಮುನ್ನ ಡಾ. ಮಲ್ಲಿಕಾ ಘಂಟಿ ಮೂರು ಬಾರಿ ಕುಲಪತಿ ಹುದ್ದೆಗೆ ವಿಸ್ತರಣೆಯಾಗಿದ್ದರು. ಹೀಗಾಗಿ ಹಂಪಿ ವಿವಿಗೆ ಯಾರೇ ಕುಲಪತಿಯಾದರೂ ಶಾಶ್ವತವಾಗಿ ನೆಲೆಯೂರುವ ಪ್ರಯತ್ನಗಳನ್ನು ನಡೆಸುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ಡಾ. ರಮೇಶ್ ವರ್ತನೆ ಕೂಡ ಇತರೆ ಆಕಾಂಕ್ಷಿಗಳಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಕುಲಪತಿ ಹುದ್ದೆಗೆ ಅಂತಿಮಗೊಂಡ ಅರ್ಜಿಗಳಲ್ಲಿ ಡಾ. ರಮೇಶ್ ಅವರ ಹೆಸರು ಸಹ ಸೇರಿದೆ. ಒಂದು ಅವಧಿ ಅಂದರೆ 3 ವರ್ಷ, ಸರಕಾರ ಮನಸ್ಸು ಮಾಡಿದರೆ ಇನ್ನೊಂದು ಅವಧಿಗೆ ವಿಸ್ತರಣೆ ಮಾಡಬಹುದು. ಎರಡನೇ ಅವಧಿ ಸಿಕ್ಕಿದರೆ ಒಟ್ಟು ಆರು ವರ್ಷಗಳ ಸೇವೆ. ಆದರೆ ರಮೇಶ್ ಅವರು ಒಂದು ಅವಧಿ ಪೂರ್ಣಗೊಂಡ ಬಳಿಕ ಒಂದು ವರ್ಷಗಳ ವಿಸ್ತರಣೆ ಮಾಡಿಕೊಂಡಿದ್ದಾರೆ.
ಒಂದು ವೇಳೆ ರಮೇಶ್ ಅವರೇ ಮತ್ತೆ ಕುಲಪತಿಯಾಗಿ ಎರಡನೇ ಅವಧಿ ಪಡೆದರೆ ಅವರು ಕುಲಪತಿಗಳಾಗಿ ಸೇವೆ 3+ 3+1 ಒಟ್ಟು ಏಳು ವರ್ಷಗಳಾಗಲಿವೆ. ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ಪ್ರಕಾರ ಇದಕ್ಕೆ ಅವಕಾಶ ಇಲ್ಲ. ಒಬ್ಬ ವ್ಯಕ್ತಿ ಎರಡು ಅವಧಿಗೆ ಕುಲಪತಿಗಳಾಗಿ ಸೇವೆ ಸಲ್ಲಿಸಬಹುದು. ಆದರೆ ಸೇವಾವಧಿ 6 ವರ್ಷ ಮಾತ್ರ. ಒಂದು ವೇಳೆ ರಮೇಶ್ ಲಾಬಿ ಮಾಡಿ ಕುಲಪತಿ ಹುದ್ದೆ ಮತ್ತೆ ಗಿಟ್ಡಿಸಿಕೊಂಡರೆ, ಅದು ವಿ.ವಿ.ಕಾಯ್ದೆಯ ಉಲ್ಲಂಘನೆಯಾಗಲಿದೆ ಎನ್ನುತ್ತಾರೆ ಇವರ ಉಮೇದುವಾರಿಕೆಯನ್ನು ವಿರೋಧಿಸುತ್ತಿರುವವರು.
ತಾನು ಕುಲಪತಿ ಆಗಿದ್ದ ವೇಳೆ ಇವರು ನಡೆಸಿದ ಅವ್ಯವಹಾರ, ಭ್ರಷ್ಟಾಚಾರದ ದೂರು ರಾಷ್ಟçಪತಿಯವರಿಗೂ ತಲುಪಿ, ಪ್ರಧಾನಿ ಕಾರ್ಯಾಲಯವು ತನಿಖೆಗೆ ಸೂಚನೆ ನೀಡಿತ್ತು. ಇದೀಗ ರಮೇಶ್ ಅವರು ಕುಲಪತಿ ಹುದ್ದೆಗೆ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬಾರದೆಂದು ಹೈಕೋರ್ಟ್ ನಲ್ಲಿ ದಾವೆ ಕೂಡ ಹೂಡಲಾಗಿದೆ
ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಅಕ್ರಮ ಆಡಳಿತದ ಕಾರಣಕ್ಕಾಗಿ ಭಾರಿ ಸುದ್ದಿಯಲ್ಲಿದೆ. ಅಲ್ಲಿನ ಕುಲಪತಿ, ಕುಲಸಚಿವ ಮತ್ತು ಇತರ ಅಧಿಕಾರಿಗಳ ಲಂಚಗುಳಿತನ ಮತ್ತು ಉಡಾಫೆ ಆಡಳಿತದ ವಿರುದ್ಧ ಆರೋಪಿಸಿ, ಅಲ್ಲಿನ ಬೋಧಕ ಮತ್ತು ಬೋಧಕೇತರ ನೌಕರರು ತಿರುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ ನಿತ್ಯವೂ ಒಂದಿಲ್ಲೊAದು ಹಗರಣದ ಆರೋಪ ವಿವಿಯ ಒಳಾವರಣದಿಂದ ಹೊರಬರುತ್ತಲೆ ಇವೆ. ನಾಡಿಗೆ ಮಾದರಿಯಂತಿದ್ದ ಕನ್ನಡ ವಿಶ್ವವಿದ್ಯಾನಿಲಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಚಾರಗಳ ಕೇಂದ್ರವಾಗಿ ಮಾರ್ಪಟ್ಟಿರುವಂತಿದೆ. ಶೈಕ್ಷಣಿಕ ಚಟುವಟಿಕೆಗಳಿಂದ ಸದಾ ಸುದ್ದಿಯಲ್ಲಿದ್ದ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರುತ್ತಿದೆ.
ಕನ್ನಡ ವಿಶ್ವವಿದ್ಯಾನಿಲಯ ರೂಪುಗೊಂಡಿದ್ದರ ಹಿಂದೆ ಉದಾತ್ತವಾದ ಉದ್ದೇಶವಿತ್ತು. ನಾಡಿಗಷ್ಟೇ ಅಲ್ಲ, ದೇಶದಲ್ಲಿ ಇದೊಂದು ವಿಶಿಷ್ಟ ವಿಶ್ವವಿದ್ಯಾನಿಲಯವಾಗಬೇಕೆಂಬ ಕನಸು, ನಿರೀಕ್ಷೆಗಳಿದ್ದವು. ಕನ್ನಡ ಪ್ರಜ್ಞೆಯನ್ನು ವಿಸ್ತರಿಸುವ ಸಲುವಾಗಿ ಸಂಶೋಧನಾ ವಿದ್ಯಾರ್ಥಿಗಳೊಡಗೂಡಿ ಅಕಾಡೆಮಿಕ್ ವಿದ್ವಾಂಸರು ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದರು.
ಮೈಸೂರು ವಿಶ್ವವಿದ್ಯಾನಿಲಯವನ್ನು ಬಿಟ್ಟರೆ ಪ್ರಕಟಣೆಯಲ್ಲಿ ಒಂದು ಕೈ ಹೆಚ್ಚಾಗಿಯೇ ಕನ್ನಡ ವಿಶ್ವವಿದ್ಯಾನಿಲಯವು ಗಮನಾರ್ಹ ಸಾಧನೆ ಮಾಡಿದ್ದು ಸುಳ್ಳಲ್ಲ. ಇದಕ್ಕೆ ಪೂರಕವೆಂಬAತೆ ಅಲ್ಲಿನ ಪ್ರತಿಭಾ ಸಂಪನ್ನ ಅಧ್ಯಾಪಕ ವರ್ಗ ಮತ್ತು ಇವೆಲ್ಲವನ್ನೂ ಅರ್ಥಮಾಡಿಕೊಂಡAತೆ ಅಲ್ಲಿಗೆ ನೇಮಕವಾಗುತ್ತಿದ್ದ ಕುಲಪತಿಗಳ ಆಡಳಿತ ಶ್ರದ್ಧೆಗಳಿಂದಾಗಿ ಮಹತ್ತರ ಸಾಧನೆಗಳಿಗೆ ವಿವಿ ಕಾರಣವಾಗಿತ್ತು. ಆದರೆ ಇದೀಗ ವಿವಿ ಅಕ್ರಮ ಕೂಟಗಳಿಗೆ ಕಾರಣವಾಗಿರುವುದು ಭಾರೀ ಅಸಮಧಾನದ ಅಲೆಗಳನ್ನು ಎಬ್ಬಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
