ಉತ್ತರ ಕರ್ನಾಟಕ : ದಾಖಲೆ ಪ್ರಮಾಣದಲ್ಲಿ ಕುಸಿದ ತಾಪಮಾನ

ಬೆಂಗಳೂರು

       ಉತ್ತರ ಕರ್ನಾಟಕದಲ್ಲಿ ತಾಪಮಾನ ಗಣನೀಯವಾಗಿ ಇಳಿಕೆ ಕಂಡಿದೆ. ಗುರುವಾರ ಈ ಭಾಗದ ಬಹುತೇಕ ಜಿಲ್ಲೆಗಳು ಅತೀ ಕನಿಷ್ಠ ತಾಪಮಾನ ಜೊತೆಗೆ ಭಾರೀ ಚಳಿಗೆ ಸಾಕ್ಷಿಯಾಗಿವೆ.

    ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಇಂದು ಶುಕ್ರವಾರ ಅತ್ಯಧಿಕ ಚಳಿ ದಾಖಲಾಗಿದ್ದು, ಇನ್ನೂ ಕೆಲವು ದಿನ ಈ ಮೈಕೊರೆಯುವ ಚಳಿಯ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.

    ಹವಾಮಾನ ಇಲಾಖೆ ಪ್ರಕಾರ, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಲಿನ ಹೊರತಾಗಿಯು ರಾತ್ರಿ ಮತ್ತು ಬೆಳ್ಳಂಬೆಳಗ್ಗೆ ಅತ್ಯಧಿಕ ಚಳಿ ದಾಖಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಗುರುವಾರ 12.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಇಂದು ಶುಕ್ರವಾರ 11.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಉತ್ತರ ಕರ್ನಾಟಕದಲ್ಲಿ ಇಂದಿನ ಬೆಳಗ್ಗೆವರೆಗೆ ವಿಜಯಪುರದಲ್ಲಿ ಅತ್ಯಧಿಕ ಕಡಿಮೆ ತಾಪಮಾನ (11.8 ಡಿಸೆ) ದಾಖಲಾಗಿದೆ. ಉಳಿದಂತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.4 ಡಿ.ಸೆ, ಬೀದರ್ 14 ಡಿ.ಸೆ, ಬಾಗಲಕೋಟೆ 15.2 ಡಿ.ಸೆ, ಗದಗ 15.1 ಡಿ.ಸೆ, ಹಾವೇರಿ 16.4ಡಿ.ಸೆ, ರಾಯಚೂರು 15.4 ಡಿ.ಸೆಲ್ಸಿಯಸ್ ನಷ್ಟು ಚಳಿ ದಾಖಲಾಗಿದೆ.

    ಈ ಮೂಲಕ ಉತ್ತರ ಕರ್ನಾಟಕದಲ್ಲಿ ಭಾರಿ ಚಳಿಯ ವಾತಾವರಣ ಸೃಷ್ಟಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕಳೆದ ಎರಡು ದಿನಗಳಿಂದ ಚಳಿ ಕ್ರಮೇಣ ಏರಿಕೆ ಆಗಿದ್ದು, ಈ ಭಾಗಕ್ಕಿಂತಲೂ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಚಳಿ ಬೀಳುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap