ಶತಮಾನೋತ್ಸವದ ವೈಭದಲ್ಲಿ ರೆಡ್ ಕ್ರಾಸ್ ಸಂಸ್ಥೆ: ಅಂಚೆ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಬೆಂಗಳೂರು:

ಬೆಂಗಳೂರು, ಮಾ, 22; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಇಂದು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಯಿತು.

ನಗರದ ರೇಸ್ ಕೋರ್ಸ್ ರಸ್ತೆಯ ತನ್ನ ಕೇಂದ್ರ ಕಛೇರಿಯಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಶ್ರೀ ಎಸ್. ರಾಜೇಂದ್ರ ಕುಮಾರ್ ಬಿಡುಗಡೆ ಮಾಡಿದರು.

ರಾಜ್ಯದಲ್ಲಿ ಗುರುವಾರದವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ | ಹೈ ಅಲರ್ಟ್ ಘೋಷಣೆ

ಬಳಿಕ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆಯು ಮಾನವೀಯ ಸೇವಾ ಕಾರ್ಯಗಳ ಮೂಲಕ ಬಹಳಷ್ಟು ಜನರಿಗೆ ಸೇವೆ ನೀಡುತ್ತಿದೆ. ಈ ಸಂಸ್ಥೆಯ ಶತಮಾನೋತ್ಸವದ ಭಾಗವಾಗಿ ಈ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತಿರುವುದು ಅಂಚೆ ಇಲಾಖೆಗೆ ಸಂತಸ ತಂದಿದೆ ಎಂದರು.

ಕರ್ನಾಟಕ ರೆಡ್ ಕ್ರಾಸ್ ಶಾಖೆಯ ಸಭಾಪತಿ ಶ್ರೀ ಎಸ್. ನಾಗಣ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಹಯು ಎಲ್ಲಾ ಮಾನವೀಯ ಸೇವಾಕಾರ್ಯಗಳ ಜೊತೆಗೆ ಎಲ್ಲಾ ಸಮಯದಲ್ಲೂ ನಿರಂತರವಾಗಿ ತನ್ನ ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದೆ. ವಿಶೇಷವಾಗಿ ದಾನಿಗಳು ಹಾಗೂ ಸಂಸ್ಥೆಗಳ ಸಹಕಾರ ಅನನ್ಯ. ರೆಡ್ ಕ್ರಾಸ್ ಇತಿಹಾಸದಲ್ಲಿ ಈ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಹತ್ವದ್ದು ಎಂದರು.

ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿಯ ಮಾಜಿ ಸದಸ್ಯ ಡಾ. ವೂಡೇ ಪಿ ಕೃಷ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಹಲವು ಸವಾಲುಗಳ ನಡುವೆ ಸಾಗಿ ಬಂದಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್ ಗೆ ಜಗತ್ತಿನಾದ್ಯಂತ ವಿಶೇಷ ಮಹತ್ವ ಹಾಗೂ ಮನ್ನಣೆ ಇದೆ ಎಂದು ಹೇಳಿದರು.

ಬೆಳ್ಳಂಬೆಳಗ್ಗೆ 9 ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ದಾಳಿ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಗೋಪಾಲ್ ಬಿ. ಹೊಸೂರ್ ಮಾತನಾಡಿ, ಕೋವಿಡ್-19 ಸಂದರ್ಭವಷ್ಟೇ ಅಲ್ಲದೇ ಇನ್ನಿತರ ಪ್ರವಾಹ ಹಾಗೂ ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಉತ್ತಮವಾಗಿ ಕೆಲಸ ಮಾಡಿದೆ. ಇಲ್ಲಿನ ಸ್ವಯಂಸೇವಕರ ಪಾತ್ರ ಶ್ಲಾಘನೀಯ ಎಂದರು.

ಡಾ. ಕುಮಾರ್ ವಿ.ಎಲ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಆನಂದ್ ಎಸ್. ಜಿಗಜಿನ್ನಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಶ್ರೀ ಹಿಮಾಂಶು ಚೌದ್ರಿ, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರು, ಸ್ವಯಂಸೇವಕರು ಭಾಗವಹಿಸಿದ್ದರು.

 ಹೆಚ್.ಎಸ್.ಬಾಲಸುಬ್ರಮಣ್ಯ ,ಪ್ರಧಾನ ಕಾರ್ಯದರ್ಶಿ

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap