ನಿಮ್ಮ ನಾಲಿಗೆ ಹರಿಬಿಟ್ಟರೆ ಹುಷಾರ್‌ : ನಾಗೇಂದ್ರಗೆ ರೆಡ್ಡಿ ವಾರ್ನಿಂಗ್‌

ಬಳ್ಳಾರಿ:

     ಬಿಜೆಪಿ ವಿರುದ್ಧ ನಾಲಿಗೆ ಹರಿಬಿಟ್ಟರೆ ನಿಮ್ಮ ವಿರುದ್ಧದ ದಾಖಲೆ ಬಿಚ್ಚಿಡುವೆ ಎಂದು ಮಾಜಿ ಸಚಿವ ನಾಗೇಂದ್ರ ಅವರಿಗೆ ಶಾಸಕ ಜನಾರ್ಧನ ರೆಡ್ಡಿಯವರು ಎಚ್ಚರಿಕೆ ನೀಡಿದ್ದಾರೆ.

    ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿದ ನಾಗೇಂದ್ರ ಅವರಿಗೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ನಾಗೇಂದ್ರ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಆರೋಪಗಳನ್ನು ಮಾಡಿದರು.

   ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿರುವೆ ಎಂದು ಕೆಲವರು ನಂಬಿದ್ದಾರೆ. ಇದು ಸುಳ್ಳು ಎಂದು ನಾನು ಯಾರನ್ನೂ ನಂಬಿಸಬೇಕಿಲ್ಲ. ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ‌ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ‌. ನಾನು ಹಲವು ಬಾರಿ ಜೈಲು‌ ನೋಡಿದ್ದೇನೆ. ಅವನಮ್ಮನ್, ನಿಮ್ಮ ನಾಯಕ, ಇಂತ ಜೈಲಿಗೆ ಯಾವುದಕ್ಕೂ ಹೆದರಿ ಬೀಳಲ್ಲ. ಆದರೇ ಒಂದು ಸುಳ್ಳು ತಗೊಂಡು ಬಂದು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀವು ನೋಡ್ತಿರಿ, ಈ ಹಗರಣ ಅಂತ ಬಿಜೆಪಿಯ ಯಾರು ಯಾರು ಮಾಡ್ತಿದಾರಲ್ಲ ಅವರನ್ನು ಸುತ್ತಿಕೊಳ್ಳುತ್ತದೆ. ಅವರೆಲ್ಲರ ಹೆಸರನ್ನು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲು ಆಗ್ತಾರೆ ನೋಡ್ತಾ ಇರಿ ಎಂದು ಹೇಳಿದರು.

    ನಾಗೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜನಾರ್ಧನ ರೆಡ್ಡಿಯವರು ಅವರು, ಕಾಂಗ್ರೆಸ್ ಸರ್ಕಾರಗಳನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎನ್ನುತ್ತಿರುವ ನಾಗೇಂದ್ರ ಎರಡು ವರ್ಷ ಜೈಲಲ್ಲಿ ಇದ್ದಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂಬುದನ್ನು ಮರೆಯಬಾರದು. ಬಿಜೆಪಿ ವಿರುದ್ಧ ಮಾತನಾಡುವುದನ್ನು ಮುಂದುವರಿಸಿದರೆ ಅವರ ವಿರುದ್ಧದ ಆರೋಪ ಪಟ್ಟಿ ಬಿಚ್ಚಿಡುತ್ತೇನೆಂದು ಎಚ್ಚರಿಸಿದರು.

   ನನ್ನನ್ನು ಜೈಲಿಗೆ ಹಾಕಿದ್ದು ಯುಪಿಐ ಸರ್ಕಾರ. ನಾಗೇಂದ್ರ ಮತ್ತು ಸಂಗಡಿಗರು ಜಿಲ್ಲೆಯಲ್ಲಿ ಮಾಡುತ್ತಿದ್ದ ಅಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ನಾನು ಸರಿಯಾಗಿ ನಿಭಾಯಿಸಿರಲಿಲ್ಲ ಎಂಬುದು ನನ್ನ ಮೇಲಿನ ಆರೋಪವಾಗಿತ್ತು. ನಾನು ನಾಲ್ಕು ವರ್ಷ ಜೈಲಲ್ಲಿದ್ದೆ. ನಾಗೇಂದ್ರ ಕೂಡ ಎರಡು ವರ್ಷ ಇದ್ದರು. ನಾಗೇಂದ್ರ ಹೀಗೆ ಮಾತನಾಡುವುದನ್ನು ಮುಂದುವರಿಸಿದರೆ, ಅಕ್ರಮ ಗಣಿಗಾರಿಕೆಯಲ್ಲಿ ನಾಗೇಂದ್ರ ಪಾತ್ರದ ಕುರಿತ ಚಾರ್ಜ್‌ಶೀಟ್‌ ಅನ್ನು ಜನರ ಮುಂದಿಡುವೆ ಎಂದು ಹೇಳಿದರು.

    ಸಚಿವರಾದ ಬಳಿಕ ನಾಗೇಂದ್ರ ವಾಲ್ಮೀಕಿ ನಿಗಮದಲ್ಲಿ ಅವ್ಯಹಾರ ಮಾಡಿದ್ದಾರೆ. ವಿಮಾನ ಟಿಕೇಟ್, ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಮನೆ ಕೆಲಸಗಾರರಿಗೆ ನಿಗಮ ಹಣ ಬಳಿಸಿದ್ದಾರೆ. ಬಳ್ಳಾರಿ, ರಾಯಚೂರು, ಕೊಪ್ಪಳದ ಲೋಕಸಭಾ ಚುನಾವಣೆಗೆ ಬಳಸಿದ್ದಾರೆಂದು ತಿಳಿಸಿದರು. ಇದೇ ವೇಳೆ ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು