2020 ರ ಗಲಭೆ ಪ್ರಕರಣದ ಸ್ಫೋಟಕ ಮಾಹಿತಿ ಬಯಲು

ನವಿ ಮುಂಬೈ:

    ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಗುರುವಾರದ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಟಾಸ್‌ ಗೆದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಭಾರತ ಮೊದಲು ಬೌಲಿಂಗ್‌ ನಡೆಸಲಿದೆ. ಪಂದ್ಯದಲ್ಲಿ ಗೆದ್ದವರು ನ.2 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.

   ಮಂದಾನ ಜೊತೆಗೆ ಉತ್ತಮ ಆರಂಭ ನೀಡುತ್ತಿದ್ದ ಪ್ರತೀಕಾ ರಾವಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಶಫಾಲಿ ವರ್ಮಾಗೆ ಈ ಪಂದ್ಯದಲ್ಲಿ ಅವಕಾಶ ಲಭಿಸಿತು. ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ರಿಚಾ ಮತ್ತು ಕ್ರಾಂತಿ ಗೌಡ್‌ ಮತ್ತೆ ತಂಡಕ್ಕೆ ಮರಳಿದರು. ಇವರಿಗಾಗಿ ಹರ್ಲಿನ್‌ ಮತ್ತು ಉಮಾ ಜಾಗಬಿಟ್ಟುಕೊಟ್ಟರು.

   ಅಲೀಸಾ ಹೀಲಿ ಗಾಯದಿಂದ ಚೇತರಿಕೆ ಕಂಡು ಮತ್ತೆ ತಂಡದ ನಾಯಕಿಯಾಗಿ ಆಡಲಿಳಿದರು. ಉಳಿದಂತೆ ವೇರ್‌ಹ್ಯಾಮ್ ಬದಲಿಗೆ ಸೋಫಿ ಮೊಲಿನಿಯಕ್ಸ್ ಅವಕಾಶ ಪಡೆದರು.

   ಎಂಟು ವರ್ಷಗಳ ಹಿಂದೆ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಎದುರು 115ಎಸೆತಗಳಲ್ಲಿ ಅಜೇಯ 171 ರನ್ ಗಳಿಸಿದ್ದ ಹರ್ಮನ್‌ಪ್ರೀತ್ ಕೌರ್ ಇಂದಿನ ಪಂದ್ಯದಲ್ಲಿಯೂ ಅದೇ ಆತ್ಮವಿಶ್ವಾಸದೊಂದಿಗೆ ಬ್ಯಾಟ್‌ ಬೀಸಬೇಕಿದೆ. ಮೊದಲ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್ ಅವರು ನಾಯಕೀಯ ಆಟವಾಡಿ ಬಲಿಷ್ಠ ಇಂಗ್ಲೆಂಡ್‌ಗೆ ಹೀನಾಯ ಸೋಲುಣಿಸಿದ್ದರು. ಅದೇ ರೀತಿ ಕೌರ್‌ ಕೂಡ ಮಿಂಚಬೇಕಿದೆ.

Recent Articles

spot_img

Related Stories

Share via
Copy link