ಬೆಂಗಳೂರು:
ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಬಿಜೆಪಿಯು, ಅಧಿಕಾರಕ್ಕೆ ಬಂದರೆ ಪಡಿತರದಲ್ಲಿ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಸಿರಿಧಾನ್ಯ ವಿತರಣೆ ವಿತರಣೆ ಮಾಡುವುದಾಗಿ ಹಾಗೂ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವ ಭರವಸೆಯನ್ನು ನೀಡಿದೆ.ಆದರೆ ನೀವು ಮೊದಲು ಪ್ರಣಾಳಿಕೆ ರಿಲೀಸ್ ಮಾಡುವುದಕ್ಕೂ ಮುನ್ನ ನಿಮ್ಮ ಸಾಧನೆಯ ಅಸಲಿ ರೀಪೋರ್ಟ್ ಕಾರ್ಡ್ ರಿಲೀಸ್ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ನೀವು ಕಾಂಗ್ರೆಸ್ ಗ್ಯಾರೆಂಟಿಗಳನ್ನು ಲೇವಡಿ ಮಾಡಲು ಹೊರಟಿದ್ದೀರಿ ಆದರೆ ಪ್ರತಿ ಬಿಪಿಎಲ್ ಕುಟುಂಬಕ್ಕೂ ದಿನಂಪ್ರತಿ 1/2 ಲೀ ಹಾಲು ಕೊಡುವ ಯೋಜನೆ ಸರಿಯಿದೆ ಆದರೆ ಅದಕ್ಕೆ ಸಂಪನ್ಮೂಲಗಳ ಕ್ರೌಡಿಕರಣ ಹೇಗೆ ಮಾಡುತ್ತೀರ ಎಂದು ಹೇಳಿ ನಮ್ಮ ಪ್ರಣಾಳಿಕೆ ಸರಿಯಾದ ಲೆಕ್ಕಾಚಾರವಿಲ್ಲದ್ದು ಎನ್ನುವ ನೀವು ಹೇಗೆ ಹಾಲು ಕೊಡ್ತಿರಾ ಎಂದು ಕಾಂಗ್ರೆಸ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಮತ್ತು ಸಚಿವ ಡಾ.ಕೆ.ಸುಧಾಕರ್ ಅವರು, ಪ್ರಣಾಳಿಕೆ ಸಿದ್ಧಪಡಿಸಲು 38 ವಿವಿಧ ವಿಭಾಗ, 178 ಕ್ಷೇತ್ರಗಳಲ್ಲಿ ಸಲಹೆ ಪಡೆಯಲಾಗಿದೆ. ಮಿಸ್ ಕಾಲ್ ಮೂಲಕ 29,306 ಸಲಹೆ ಸೇರಿ ಒಟ್ಟು 6 ಲಕ್ಷ ಸಲಹೆ ಬಂದಿವೆ. ಎಲ್ಲವನ್ನೂ ಪರಿಶೀಲನೆ ನಡೆಸಿದ್ದೇವೆ. 17 ರಾಷ್ಟ್ರೀಯ ನಾಯಕರು ಪ್ರಣಾಳಿಕೆ ಸಿದ್ಧಪಡಿಸಲು ಸಹಕರಿಸಿದ್ದಾರೆ. ತಜ್ಞರ ಕಡೆಯಿಂದ 900 ಸಲಹೆ ಬಂದಿವೆ, 50 ಕ್ಷೇತ್ರ ತಜ್ಞರ ಸಲಹೆ ಬಂದಿದೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಮಾತನಾಡಿ, ಇಡೀ ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ, ದೇಶದ ಆಡಳಿತದಲ್ಲಿ ದಿಕ್ಸೂಚಿ ಪಾತ್ರ ವಹಿಸುತ್ತಿದೆ. ದೇಶವನ್ನು, ರಾಜ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಣಾಳಿಕೆ ಮಾಡಬೇಕು, ಆಡಳಿತ ನಡೆಸಬೇಕಿದೆ. ಅತ್ಯಂತ ಪ್ರಬಲ ರಾಜ್ಯಗಳ ಒಕ್ಕೂಟವೇ ದೇಶದ ಬಲ. ಕರ್ನಾಟಕದ ಅಭ್ಯುದಯಕ್ಕೆ ಪೂಕರವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.