ತಂತ್ರಜ್ಞಾನ ಬಳಸಿ ಜಿ.ಎಸ್.ಟಿ ಸೋರಿಕೆಗೆ ತಡೆ : ಮುಖ್ಯಮಂತ್ರಿ

ಬೆಂಗಳೂರು

   ಆಧುನಿಕ ತಂತ್ರಜ್ಞಾನ ಬಳಸಿ ಈಗಾಗಲೇ ಜಿ.ಎಸ್.ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ.

    ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಪ್ರಕಾಶ್ ಕೆ ರಾಥೋಡ್ ಅವರ ಪರವಾಗಿ ಎಂ. ನಾಗರಾಜು ಅವರು ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಜಿ.ಎಸ್. ಟಿ ಸಂಗ್ರಹಣೆಯಲ್ಲಿ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿರುವ ದೊಡ್ಡ ರಾಜ್ಯಗಳು ಸಹ ಇಷ್ಟು ಪ್ರಮಾಣದಲ್ಲಿ ಜಿ.ಎಸ್.ಟಿ ಸಂಗ್ರಹಣೆ ಮಾಡುತ್ತಿಲ್ಲ. ರಾಜ್ಯದಲ್ಲಿ ವ್ಯವಸ್ಥಿತ ಜಾಲಗಳಿವೆ. ಅವುಗಳನ್ನು ಪತ್ತೆ ಹಚ್ಚಿ ಜಿ.ಎಸ್.ಟಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದರು.

   ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿ.ಎಸ್.ಟಿ ಸಂಗ್ರಹಣೆಗಾಗಿ ವಿಜಿಲೈನ್ಸ್ನ ಬಹಳಷ್ಟು ಚುರುಕುಗೊಳಿಸಿದ್ದೇವೆ. ಅಡೆಕೆ ಮಾರಾಟಗಾರರಿಂದ ಸುಮಾರು 8 ಕೋಟಿ ರೂಗಳಷ್ಟು ಆದಾಯ ಬಂದಿದೆ. ಮಂಗಳೂರಿನಿAದ ದೆಹಲಿಯವರೆಗೆ ಸ್ಕಾçಫ್ ಮಾರಾಟಗಾರರ ದೊಡ್ಡ ಜಾಲವಿದ್ದು, ಅವುಗಳನ್ನು ಸಹ ಭೇದಿಸಿ ಜಿ.ಎಸ್.ಟಿ. ಸಂಗ್ರಹಣೆಗೆ ಕ್ರಮ ವಹಿಸಿಲಾಗಿದೆ.

    ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಂಗಳೂರಿನಲ್ಲಿರುವ ಗೋಡೌನ್ ಹಾಗೂ ಶೋ ರೂಂ ಗಳು ಬಿಲ್ಲುಗಳನ್ನು ನೀಡದೇ ಹಾಗೂ ದಾಖಲೆಗಳಿಲ್ಲದೇ ತೆರಿಗೆ ವಂಚಿಸುತ್ತಿರುವುದನ್ನು ಪತ್ತೆ ಹಚ್ಚಲು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap