ರಾಷ್ಟ್ರಪತಿ ಭವನ : ದರ್ಬಾರ್ ಹಾಲ್ ಮರುನಾಮಕರಣ ….!

ನವದೆಹಲಿ:

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದೊಳಗಿನ ಎರಡು ಮಹತ್ವದ ಸಭಾಂಗಣಗಳಾದ ದರ್ಬಾರ್ ಹಾಲ್ ಮತ್ತು ಅಶೋಕ್ ಹಾಲ್ ನ ಹೆಸರು ಬದಲಾವಣೆ ಮಾಡಿದ್ದು, ಕ್ರಮವಾಗಿ ಗಣತಂತ್ರ ಮಂಟಪ್‌ ಹಾಗೂ ಆಶೋಕ ಮಂಟಪ್‌ ಎಂದು ಮರುನಾಮಕರಣ ಮಾಡಿದ್ದಾರೆ.

   ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕತೆಯನ್ನು ಪಸರಿಸುವ ನಿರಂತರ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರಪತಿ ಭವನದ ಸೆಕ್ರೆಟ್ರಿಯೇಟ್ ಪ್ರಕಟಣೆಯಲ್ಲಿ ತಿಳಿಸಿದೆ.

    ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ‘ದರ್ಬಾರ್ ಹಾಲ್’ ಮತ್ತು ‘ಅಶೋಕ್ ಹಾಲ್’ ಅನ್ನು ಈಗ ಕ್ರಮವಾಗಿ ‘ಗಣತಂತ್ರ ಮಂಟಪ’ ಮತ್ತು ‘ಅಶೋಕ ಮಂಟಪ’ ಎಂದು ಕರೆಯಲಾಗುತ್ತದೆ. ಭಾರತದ ಗಣರಾಜ್ಯ ಮತ್ತು ಅದರ ಇತಿಹಾಸವನ್ನು ಪ್ರತಿಬಿಂಬಿಸಲು ಈ ಬದಲಾವಣೆಯನ್ನು ಮಾಡಲಾಗಿದೆ. ಹೆಸರು ಬದಲಾವಣೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

    ಬ್ರಿಟಿಷರ ಆಳ್ವಿಕೆಯಲ್ಲಿ ‘ದರ್ಬಾರ್ ಹಾಲ್’ ನಿರ್ಮಾಣವಾಗಿದೆ. ಈ ಸಭಾಂಗಣವು ಅಂದಿನ ರಾಜಕೀಯ ಮತ್ತು ಸಾಮಾಜಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅನೇಕ ಬ್ರಿಟಿಷ್ ಆಡಳಿತಗಾರರ ನ್ಯಾಯಾಲಯಗಳು ಈ ಸಭಾಂಗಣದಲ್ಲಿ ನಡೆಯುತ್ತಿದ್ದವು. ಭಾರತದ ಸ್ವಾತಂತ್ರ್ಯದ ನಂತರ, ಈ ಸಭಾಂಗಣವು ರಾಷ್ಟ್ರಪತಿ ಭವನದ ಪ್ರಮುಖ ಭಾಗವಾಯಿತು.

    ಇನ್ನು ಅಶೋಕ್ ಹಾಲ್ ಭಾರತದ ಪ್ರಾಚೀನ ಚಕ್ರವರ್ತಿ ಅಶೋಕನ ಹೆಸರನ್ನು ಇಡಲಾಗಿದೆ. ಈ ಸಭಾಂಗಣವು ಅಶೋಕನ ಆಳ್ವಿಕೆಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅಶೋಕ್ ಹಾಲ್ ರಾಷ್ಟ್ರಪತಿ ಭವನದ ಅತ್ಯಂತ ಆಕರ್ಷಕ ಮತ್ತು ಸುಸಜ್ಜಿತ ಕೊಠಡಿಗಳಲ್ಲಿ ಒಂದಾಗಿದೆ.

Recent Articles

spot_img

Related Stories

Share via
Copy link
Powered by Social Snap