ಶಿರಸಿ:
ಮೊಗೇರ ಸಮಾಜ ಶಿರಸಿ ಇವರಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮವೊಂದರಲ್ಲಿ ಜುಲೈ 27ರಂದು ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಪಾಲ್ಗೊಂಡು ನಗರದ ಗಾಂಧಿನಗರ ದಲ್ಲಿ ನವೀಕೃತ ಶ್ರೀ ಪದ್ಮಾವತಿ ಸಮಾಜ ಮಂದಿರದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಸಚಿವರು ಇದೇ ಈ ಸಮಯದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.ಮಾಜಿ ಶಾಸಕ ವಿವೇಕಾನಂದ ವೈದ್ಯ,ನಗರಸಭೆ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿ, ಗ್ಯಾರoಟಿ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ್ ಇತರರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
